ಬೆಂಗಳೂರು: ಪತ್ನಿಯೊಂದಿಗಿನ ಖಾಸಗಿ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದಾಗಿ ಬೆದರಿಸಿ ಹಾಕಿ 10 ಲಕ್ಷ ರೂ. ಹಾಗೂ ಆಕೆಯ ವೇತನಕ್ಕಾಗಿ ಪತಿಯೇ ಬೇಡಿಕೆ ಇಡುತ್ತಿದ್ದ ವಿಚಿತ್ರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ 28 ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನ ಅನ್ವಯ ಆಕೆಯ ಪತಿ ಸ್ವರೂಪ್ ಭಾರದ್ವಾಜ್ ಎಂಬಾತ ಹಾಗೂ ಆತನ ಪೋಷಕರ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


