ಹುಬ್ಬಳ್ಳಿ: ವ್ಯಾಪಾರಿಯೊಬ್ಬರ ಬೆತ್ತಲೆ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ.
ಜೋಯಾ ನದಾಫ, ಪರ್ವಿನ ಬಳ್ಳಾರಿ, ಸಯ್ಯದ್ ತಹಶೀಲ್ದಾರ, ತೌಸಿಫ್, ಅಬ್ದುಲ್ ಬಂಧಿತರಾಗಿದ್ದಾರೆ ಎಂದು ಡಿಸಿಪಿ ಮಹಾನಿಂಗ ನಂದಗಾಂವಿ ತಿಳಿಸಿದ್ದಾರೆ.
ಪಾತ್ರೆ ವ್ಯಾಪಾರಿ ಚಗನ್ ಲಾಲ್ ಎಂಬುವರೆ ಈ ಗ್ಯಾಂಗ್‌ನಿಂದ ಮೋಸಕ್ಕೊಳಗಾಗಿರುವ ವ್ಯಾಪಾರಿಯಾಗಿದ್ದು, ಬಂಧಿತ ಜೋಯಾ, ಚಗನ್ ಲಾಲ್ ಅವರ ಮೊಬೈಲ್ ಗೆ ಕರೆಮಾಡಿ ಪರಿಚಯಿಸಿಕೊಂಡು ಉಣಕಲ್ ಕ್ರಾಸ್ ಗೆ ಕರೆಸಿಕೊಂಡಿದ್ದಾಳೆ. ನಂತರ ರಾಜನಗರದ ಮನೆಗೆ ಕರೆದುಕೊಂಡು ಹೋಗಿ ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾಳೆ. ತದನಂತರ ಐವರು ಸೇರಿ ಕೇಳಿದಷ್ಟು ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಚಗನ್ ಲಾಲ್‌ರು ಸೋಮವಾರ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ತಂಡದ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ ಎರಡು ಬೈಕ್, ಐದು ಮೊಬೈಲ್ ಫೋನ್ಸ್, 9 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296