ಕೊಪ್ಪಳ: ಏಪ್ರಿಲ್ 19 ರಂದು ಕಿನ್ನಾಳ ಗ್ರಾಮದಲ್ಲಿರುವ ಅನುಶ್ರೀ ಮಡಿವಾಳರ್ ಅನ್ನೋ ಏಳು ವರ್ಷದ ಬಾಲಕಿ, ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಮನೆ ಮುಂದೆ ಆಡುತ್ತಿದ್ದಾಗ ಬಾಲಕಿ ಧಿಡೀರನೆ ನಾಪತ್ತೆಯಾಗಿದ್ದಳು.
ಏಪ್ರಿಲ್ 19 ರ ಸಂಜೆಯಿಂದ ಅನುಶ್ರೀಯ ಹೆತ್ತವರು, ಗ್ರಾಮದ ಜನರು, ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಗ್ರಾಮದ ಹೊರವಲಯದಲ್ಲಿರುವ ಕೆರೆ, ಬಾವಿಗಳನ್ನು ಶೋಧ ಮಾಡಿದ್ದರು. ಯಾರಾದರು ನಿಧಿಗಾಗಿ ಬಾಲಕಿಯನ್ನು ಬಲಿ ಕೊಡಲು ಕರೆದುಕೊಂಡು ಹೋಗಿರಬಹುದು ಅಂತ ತಮ್ಮೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸ್ಮಶಾನಗಳನ್ನು ಕೂಡಾ ಹುಡುಕಿ ಬಂದಿದ್ದರು. ಆದರೆ ಎಲ್ಲಿಯೂ ಕೂಡ ಬಾಲಕಿಯ ಸುಳಿವು ಸಿಕ್ಕಿರಲಿಲ್ಲಾ. ಜೊತೆಗೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೂಡಾ ಕೊಟ್ಟಿದ್ದರು.
ಪೊಲೀಸರು ಕೂಡ ಬಾಲಕಿಯ ಮಿಸ್ಸಿಂಗ್ ಬಗ್ಗೆ ಎಲ್ಲಡೆ ಮಾಹಿತಿ ನೀಡಿದ್ದರು. ಆದರೂ ಬಾಲಕಿಯ ಸುಳಿವು ಸಿಕ್ಕಿರಲಿಲ್ಲ. ಆದರೆ ಶುಕ್ರವಾರ ಸಂಜೆ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ, ಭಾನುವಾರ ಸಂಜೆ ಅದೇ ಕಿನ್ನಾಳ ಗ್ರಾಮದಲ್ಲಿ ಪತ್ತೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296