ತುಮಕೂರು: ಬೈಕ್ ಸಮೇತ ಹೇಮಾವತಿ ನಾಲೆಗೆ ಬಿದ್ದ ಸವಾರ ಮೃತಪಟ್ಟಿರುವ ಘಟನೆ ಕುಂದೂರು ಬಳಿ ಹೇಮಾವತಿ ನಾಲೆಯಲ್ಲಿ ನಡೆದಿದೆ.
ಅಜೀಬ್ ವುಲ್ಲಾ(33) ಖಾನ್ ಮೃತ ದುರ್ದೈವಿ. ಹೇಮಾವತಿ ನಾಲೆಯಿಂದ 28 ಕಿಲೋಮೀಟರ್ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ.
ಕುಂದೂರು ಬಳಿ ಹೇಮಾವತಿ ನಾಲೆಗೆ ಬಿದ್ದ ಅಜೀಬ್ ವುಲ್ಲಾ ಖಾನ್ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ನಿವಾಸಿಯಾಗಿದ್ದಾರೆ. ಜ.2ನೇ ತಾರೀಕು ಅಜೀಬ್ ವುಲ್ಲಾ ನಾಲೆಗೆ ಬಿದ್ದಿದ್ದಾರೆ. ಕುಂದೂರು ಬಳಿಯ ನಾಲೆಯಲ್ಲೆ ಬೈಕ್ ಪತ್ತೆಯಾಗಿದೆ.
ಗುಬ್ಬಿ ತಾಲ್ಲೂಕಿನ ಸೋಮಲಾಪುರದ ಬಳಿ ಪತ್ತೆಯಾದ ಮೃತ ದೇಹ ಪತ್ತೆಯಾಗಿದೆ. ಮೃತ ದೇಹ ನಾಲೆಯಿಂದ ಹೊರ ತೆಗೆಯಲು ನಿನ್ನೆಯಿಂದ ಹರಸಾಹಸ ಪಡುವಂತಾಗಿದೆ. ನಿನ್ನೆಯೇ ಮೃತದೇಹ ನಾಲೆಯಲ್ಲಿ ಪತ್ತೆಯಾಗಿದೆ.
ಮೃತ ದೇಹವನ್ನು ನಾಲೆಯಿಂದ ತೆಗೆಯಲು ಕುಟುಂಬಸ್ಥರು ಮನವಿ ಮಾಡಿದ್ದಾರೆ. ನಿನ್ನೆ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಕೆ.ಬಿ ಕ್ರಾಸ್ ಪೊಲೀಸರು ಭೇಟಿ ನೀಡಿದ್ದರು. ಆದರೆ, ಮೃತ ದೇಹ ಮೇಲೆ ತೆಗೆಯಲು ವಿಫಲವಾಗಿದ್ದಾರೆ.
ಸೋಮಲಾಪುರದ ಬಳಿ ಆಳವಾಗಿರುವ ಹೇಮಾವತಿ ನಾಲೆಯಿಂದ ಮೃತದೇಹ ತೆಗೆಯುವುದು ಸವಾಲಿನ ಕೆಲಸವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx