ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀಚ ತಾಯಿಯೊಬ್ಬಳು ಮಕ್ಕಳಿಬ್ಬರ ಜೀವ ತೆಗೆದ ಘಟನೆ ನಡೆದಿದೆ. ಲಕ್ಷ್ಮಿ(7) ಮತ್ತು ಗೌತಮ್(9) ಮೃತ ಮಕ್ಕಳಾಗಿದ್ದಾರೆ. ಇವರನ್ನು ತಾಯಿ ಗಂಗಾದೇವಿ ಕೊಲೆ ಮಾಡಿದ್ದಾಳೆ.
ಗಂಗಾದೇವಿ ಕಳೆದ ಮಾರ್ಚ್ ತಿಂಗಳಲ್ಲಿ ಗಂಡನ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಳು. ಗಂಡ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗುತ್ತಿದ್ದಾನೆಂದು ದೂರು ನೀಡಿದ ಆಧಾರದ ಮೇಲೆ, ಗಂಡನನ್ನ ಬಂಧಿಸಿ ಜಾಲಹಳ್ಳಿ ಪೊಲೀಸರು ಜೈಲಿಗೆ ಕಳಿಸಿದ್ದರು. ಅದಾದ ಬಳಿಕ ಇದೀಗ ಇಬ್ಬರು ಮಕ್ಕಳನ್ನ ಕೊಲೆ ಮಾಡಿದ್ದಾಳೆ.
ಹೆತ್ತ ತಾಯಿಯೇ ಮಂಗಳವಾರ ರಾತ್ರಿ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದು, ಬಳಿಕ ಕಂಟ್ರೋಲ್ ರೂಂಗೆ ಕರೆ ಮಾಡಿ “ಮಕ್ಕಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ” ಹೇಳಿದ್ದಾಳೆ. ಕೂಡಲೇ ಘಟನಾ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆರೋಪಿ ಗಂಗಾದೇವಿಯನ್ನ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


