ಬೆಂಗಳೂರು: ಇಂಜೆಕ್ಷನ್ ರಿಯಾಕ್ಷನ್ ಆಗಿ 11 ವರ್ಷದ ಪ್ರೀತಮ್ ನಾಯಕ್ ಸಾವನಪ್ಪಿದ್ದಾನೆ. ಕಳೆದ ನಾಲ್ಕು ದಿನದ ಹಿಂದೆ ಅನಾರೋಗ್ಯದ ಸಮಸ್ಯೆ ಎಂದು ಕೋಣನಕುಂಟೆಯ ರಾಜನಂದಿನಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂಜೆಕ್ಷನ್ ಕೊಟ್ಟ ಮರುದಿನವೇ ಕಾಲು ಊತ ಬಂದಿತ್ತು.
ಕೂಡಲೇ ಆಪರೇಷನ್ ಮಾಡಿಸಿದ್ದರೂ ಪ್ರೀತಮ್ ಸಾವನಪ್ಪಿದ್ದಾನೆ. ತನ್ನ ಮಗನ ಸಾವಿಗೆ ರಾಜನಂದಿನಿ ಆಸ್ಪತ್ರೆಯ ಡಾಕ್ಟರ್ ನಿರ್ಲಕ್ಷ್ಯವೇ ಕಾರಣ ಎಂದು ತಂದೆ ಪ್ರಿಯ ನಾಯಕ್, ತಾಯಿ ಕೃಷ್ಣ ಬಾಯಿ ಆರೋಪ ಮಾಡಿದ್ದಾರೆ.


