ದೇಶದ ಆಯ್ದ ನಗರಗಳಲ್ಲಿ ಬಿಎಸ್ ಎನ್ ಎಲ್ ತನ್ನ 5ಜಿ ಸಿಮ್ ಬಿಡುಗಡೆಗೊಳಿಸಿದೆ. ಮುಂಬರುವ ದಿನಗಳಲ್ಲಿ ನೆಟ್ ವರ್ಕ್ ಅಪ್‌ಡೇಟ್ ಮಾಡುವ ಮಹತ್ತರ ಯೋಜನೆ ಹೊಂದಿರುವುದಾಗಿ ತಿಳಿಸಿದೆ. ಸದ್ಯ ಆಂಧ್ರ, ತೆಲಂಗಾಣ, ಕೇರಳದಲ್ಲಿ ಈ ಸಿಮ್ ಲಭ್ಯವಿದೆ. ಇಂಟರ್ ನೆಟ್ ಸ್ಪೀಡ್ ಹೆಚ್ಚಿಸಲು ತೀರ್ಮಾನಿಸಿದೆ.
ಈ ಭಾಗದ ಜನರಿಗೆ ಅಧಿಕೃತ ಬಿಎಸ್ ಎನ್ ಎಲ್ ಸಿಮ್ ಮಾರಾಟ ಮಾಡುವವರ ಬಳಿ ಸಿಮ್ ಲಭ್ಯವಿದ್ದು, ಹಳೆ ಸಿಮ್ ಗಳನ್ನು 5ಜಿಗೆ ಬದಲಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಹೊಸ 5ಜಿ ಸಿಮ್ ವಿಶಿಷ್ಟ ಮಾದರಿಯಲ್ಲಿದ್ದು, 5ಜಿ ಎಂದು ತ್ರಿವರ್ಣದಲ್ಲಿ ಬರೆದಿದೆ. ಸಂಪೂರ್ಣವಾಗಿ 5ಜಿ ರೂಪಾಂತರಗೊಂಡ ಬಳಿಕ, ಹೊಸ ಸಿಮ್ ಅಗತ್ಯವಿಲ್ಲದೇ ಹಳೆ ಸಿಮ್ ಮೂಲಕವೇ 5ಜಿ ಸೌಲಭ್ಯ ಪಡೆಯಬಹುದು ಎಂದಿದೆ.
ಕೇಂದ್ರ ಸರ್ಕಾರದ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಹ್ಯಾಂಡಲ್ ಮೂಲಕ ವೀಡಿಯೊವೊಂದರನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು 5 ಜಿ ನೆಟ್ವರ್ಕ್ ಮೂಲಕ ವೀಡಿಯೊ ಕಾಲ್ ಮಾಡಿದ್ದಾರೆ. ‘ಬಿಎಸ್‌ಎನ್‌ಎಲ್ನ 5ಜಿ ಫೋನ್ ಕರೆಯನ್ನು ಪರೀಕ್ಷಿಸಿದೆ ‘ ಎಂದು ಸಚಿವರು ಪೋಸ್ಟ್ನಲ್ಲಿ ಬರೆದಿದ್ದಾರೆ. ಅವರು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ ಸಂಸ್ಥೆಯಲ್ಲಿ ಈ ಪರೀಕ್ಷೆ ನಡೆಸಿದ್ದಾರೆ.
ಸಾರ್ವಜನಿಕ ವಲಯದ ಉದ್ಯಮವಾಗಿರುವ ಬಿಎಸ್ಎನ್ 4 ಜಿ ಮತ್ತು 5 ಜಿ ಕಡೆಗೆ ಹೊರಳುವ ನಿಟ್ಟಿನಲ್ಲಿ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಪರೀಕ್ಷೆ ಮಾಡುತ್ತಿದೆ. ವಾಯ್ಸ್ ಆಫ್ ಇಂಡಿಯನ್ ಕಮ್ಯುನಿಕೇಷನ್ ಟೆಕ್ನಾಲಜಿ ಎಂಟಪ್ರೈ ಸಸ್ (ವಿಒಐಸಿಇ) ವರದಿ ಪ್ರಕಾರ, ದೇಶೀಯ ಟೆಲಿಕಾಂ ಕಂಪನಿಗಳ ಗುಂಪು ಬಿಎಸ್‌ಎನ್‌ಎಲ್ ಮೂಲಸೌಕರ್ಯವನ್ನು ಬಳಸಿಕೊಂಡು 5 ಜಿ ಸೇವೆ ನೀಡಲು ಸಿದ್ಧವಾಗಿದೆ. ಈ ಉದ್ಯಮ ಗುಂಪಿನಲ್ಲಿ ಟಾಟಾ ಕನ್ಸಲ್ಟೆನ್ಸಿ, ತೇಜಸ್ ನೆಟ್ವರ್ಕ್ಸ್, ವಿಎನ್‌ಎಲ್, ಯುನೈಟೆಡ್ ಟೆಲಿಕಾಂ, ಕೋರಲ್ ಟೆಲಿಕಾಂ ಮತ್ತು ಎಚ್‌ಎಫ್ಎಸಿಎಲ್ ಸೇರಿವೆ. ಇದರ ಜತೆಗೆ ಬಿಎಸ್ಎನ್ಎಲ್ 5ಜಿಯೂ ಗ್ರಾಹಕರಿಗೆ ಸಿಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296