ಬೆಂಗಳೂರು : ಮೂಲನಿವಾಸಿ ಅಂಬೇಡ್ಕರ್ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಬಿ. ಎಂ ಮುನಿಮಾರಪ್ಪ ಅವರು ಬುದ್ಧ ಪೂರ್ಣಿಮೆಯ ದಿನವನ್ನು ಸರ್ಕಾರವೇ ಆಚರಿಸಲಿ, ಸಾರ್ವಜನಿಕ ರಜೆ ಘೋಷಿಸಲಿ ಎಂದು ಮನವಿ ಮಾಡಿದರು.
ನಮ್ಮತುಮಕೂರು ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಅನೇಕ ಹಲವಾರು ದಾರ್ಶನಿಕರ, ಮಹನೀಯರ ಜಯಂತಿಗಳನ್ನು ಆಚರಿಸುತ್ತಿದ್ದು, ಬುದ್ಧ ಪೂರ್ಣಿಮೆಯ ದಿನವನ್ನು ಸರ್ಕಾರವೇ ಆಚರಿಸಿ, ಸಾರ್ವಜನಿಕ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಭಾರತವನ್ನು “ಲ್ಯಾಂಡ್ ಆಫ್ ಬುದ್ಧ ” ಎಂದು ವಿದೇಶಗಳಲ್ಲಿ ಪ್ರಧಾನ ಮಂತ್ರಿಗಳೇ ಕರೆಯುತ್ತಾರೆ. ವಿಧಾನಸೌಧದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಶಾಸಕರು ಭಗವಾನ್ ಗೌತಮಬುದ್ಧರ ಬಗ್ಗೆ ಚರ್ಚೆ ಮಾಡಿರುತ್ತಾರೆ. ಹೀಗೆ ಭಾರತದ ಹೆಮ್ಮೆಯ ಸಂಕೇತವಾಗಿರುವ ಬುದ್ಧರನ್ನು ಆತನ ತತ್ವಗಳನ್ನು ಪ್ರಜೆಗಳಿಗೆ ಅರ್ಥ ಮಾಡಿಸಲು ಪ್ರತಿ ವರ್ಷ ಬುದ್ಧ ಪೂರ್ಣಿಮೆಯನ್ನು ಸರ್ಕಾರ ಅರ್ಥ ಪೂರ್ಣವಾಗಿ ಆಚರಿಸಿ, ಸಾರ್ವಜನಿಕ ರಜೆ ಘೋಷಿಸಬೇಕು ಎಂದು ಸರ್ಕಾರಕ್ಕೆ ಮೂಲನಿವಾಸಿ ಅಂಬೇಡ್ಕರ್ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


