ಬಾಗಲಕೋಟೆ: ದುಶ್ಚಟದಿಂದ ಯುವಜನತೆ ದೂರವಿರಬೇಕು. ಆಲಸ್ಯತನವು ಸರ್ವರೋಗಗಳ ಸೂತ್ರವಾಗಿದ್ದು ಸೃಜನಾತ್ಮಕತೆಯನ್ನು ಮೈಗೂಡಿಸಿಕೊಳ್ಳಬೇಕು. ಸಮತೋಲನ ಆಹಾರ ಸೇವನೆ ದೈಹಿಕ ವ್ಯಾಯಾಮದಿಂದ ಸದೃಡ ವ್ಯಕ್ತಿತ್ವ ಬೆಳಸಿಕೊಳ್ಳಲು ಸಾಧ್ಯ ಎಂದು ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಎಸ್.ಬಿರಾದರ ಹೇಳಿದರು.
ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರಿಂದ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ 2ನೇ ದಿನದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಇಂದಿನ ದಿನ ಮಾನಗಳಲ್ಲಿ ಆಹಾರದ ಪ್ರಮಾಣದಲ್ಲಿ ಪೌಷ್ಟಿಕಾಂಶ ಕೊರತೆ ತಲೆದೋರುತ್ತಿದೆ. ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಇವುಗಳಿಗೆ ಒಳಗಾಗದೆ ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಬೇಕು. ಧನಾತ್ಮಕ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಐಕ್ಯೂಎಸಿ ಸಂಯೋಜಕರಾದ ಡಾ. ಅಪ್ಪು ರಾಠೋಡ ಅವರು ಮಾತನಾಡಿ ದೇಶದ ಭವಿಷ್ಯ ಯುವಕರ ಆರೋಗ್ಯದ ಮೇಲೆ ನಿಂತಿದೆ. ವ್ಯಾಯಾಮ, ಯೋಗಾಭ್ಯಾಸಕ್ಕೆ ಒತ್ತು ನೀಡುವುದು ಅವಶ್ಯ. ಅತಿಯಾದ ಮೊಬೈಲ್ ಬಳಕೆಗೆ ವಿದ್ಯಾರ್ಥಿಗಳು ದಾಸರಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಧುಮೇಹದಂತಹ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ಪ್ರೊ. ಆರ್ ಎಸ್ ಹಂಚಾಟೆ ಮಾತನಾಡಿ ಯುವ ಜನಾಂಗದ ಗುರಿ ಮತ್ತು ಪ್ರಯತ್ನ ಹೇಗಿರಬೇಕು ಎಂದರೆ ಪ್ರತಿಫಲ ನಿಮ್ಮನ್ನು ಹುಡುಕಿಕೊಂಡು ಬರಬೇಕು ಆ ರೀತಿಯಲ್ಲಿ ನಿಮ್ಮ ತಯಾರಿ ಇರಬೇಕು. ಸೋಲು ಗೆಲುವು ಪರಸ್ಪರರ ದ್ವೇಷವಲ್ಲ, ಸೋಲು ಎಂಬುವುದು ಜೀವನದ ಅಂತ್ಯವೂ ಅಲ್ಲ ಅದನ್ನು ತಿಳಿದುಕೊಂಡು ಮುಂದುವರೆದು ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ವಿ.ಆರ್.ಹೀರೆಮಠ, ಎನ್.ಎಸ್.ಎಸ್ ಘಟಕ 1ರ ಕಾರ್ಯಕ್ರಮಾಧಿಕಾರಿ ಎಂ.ಎಚ್.ವಡ್ಡರ, ಘಟಕ 2ರ ಕಾರ್ಯಕ್ರಮಾಧಿಕಾರಿ ಡಾ.ವಿರೂಪಾಕ್ಷಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


