ಮುಂಬೈ: 10 ಕಿ.ಮೀ. ಬಸ್ ಚಲಾಯಿಸಿ ಚಾಲಕನ ಪ್ರಾಣ ಉಳಿಸಿದ ಮಹಿಳೆ. ಈ ಘಟನೆಯು ಪುಣೆಯಲ್ಲಿ ನಡೆದಿದ್ದು, ಬಸ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಬಸ್ ಓಡಿಸಿದ ಯೋಗಿತಾ ಸತಾವ್(42) ಇವರು ತಮ್ಮ ಮಕ್ಕಳು ಹಾಗೂ ಇತರೆ ಮಹಿಳೆಯರು ಮತ್ತು ಅವರ ಮಕ್ಕಳೊಂದಿಗೆ ಕೃಷಿ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಮರಳಿ ಬರುವಾಗ ಕಾಡಿನ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಮಿನಿಬಸ್ ನ ಚಾಲಕನಿಗೆ ಮೂರ್ಛೆ ರೋಗ ಬಂದಿದೆ. ಆಗ ಬಸ್ ನ್ನು ಪಕ್ಕಕ್ಕೆ ನಿಲ್ಲಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಇದರಿಂದ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಭಯಭೀತರಾಗಿದ್ದರು. ಈ ಸಮಯದಲ್ಲಿ ಯೋಗಿತಾ ಸಾತಾವ್ ಅವರು ಜೊತೆ ಇದ್ದ ಪ್ರಯಾಣಿಕರಿಗೆ ಧೈರ್ಯ ತುಂಬಿ ತಾವೇ 10 ಕಿ.ಮೀ. ವರೆಗೆ ಬಸ್ ಚಲಾಯಿಸಿಕೊಂಡು ಹೋಗಿ ಸಮೀಪದ ಆಸ್ಪತ್ರಗೆ ಚಾಲಕನನ್ನು ದಾಖಲಿಸಿ, ಆತನ ಪ್ರಾಣ ಕಾಪಾಡಿದ್ದಾರೆ. ಹಾಗೇ ಪ್ರಯಾಣಿಕರನ್ನು ಅವರ ಮನೆಗೆ ಬಿಟ್ಟಿದ್ದಾರೆ. ಇವರ ಧೈರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy