ಕೊಪ್ಪಳ : ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಸಂದರ್ಭದಲ್ಲಿ 9 ಲಕ್ಷ ರೂಪಾಯಿ ಮೌಲ್ಯದ 18 ತೊಲೆ ಚಿನ್ನದ ಸರ ಎಗಿಸಿ ಕಳ್ಳ ಪರಾರಿಯಾದ ಘಟನೆ ಜಿಲ್ಲೆಯ ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ನಾಗರತ್ನ ಗೋಪಾಲಶೆಟ್ಟಿ ಹುಲೆಹೈದರ ಎಂಬ ಮಹಿಳೆ ತನ್ನ ಪುತ್ರನ ಜೊತೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹುಲಿಹೈದರ್ ಗ್ರಾಮಕ್ಕೆ ತೆರಳಲು ಬಸ್ಸ್ ಹತ್ತುವ ಸಂದರ್ಭದಲ್ಲಿ ತನ್ನ ಬ್ಯಾಗಿನಲ್ಲಿ ಇಟ್ಟಿದ್ದ 9 ಲಕ್ಷ ರೂಪಾಯಿ ಮೌಲ್ಯದ 18 ತೊಲೆ ಚಿನ್ನದ ಸರ ಕದ್ದಿದ್ದಾರೆ. ಕೂಡಲೇ ಮಹಿಳೆ ಕಿರುಚಾಡಿದ್ದಾರೆ.
ಅಷ್ಟರಲ್ಲಿಯೇ ಕಳ್ಳ ಪರಾರಿಯಾಗಿದ್ದಾನೆ. ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


