ತುಮಕೂರು : ನಗರದ ಸರಸ್ವತಿಪುರಂ ನಲ್ಲಿರುವ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಐ.ಸಿ.ಐ.ಸಿ.ಐ ಬ್ಯಾಂಕ್ ವತಿಯಿಂದ 30 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ICICI ಎನ್.ಐ.ಐ.ಟಿ, ಐ.ಎಫ್, ಬಿ.ಐ. ಸಂಬಂಧ ವ್ಯವಸ್ಥಾಪಕ ಕಾರ್ಯಕ್ರಮವನ್ನು ಶುಕ್ರವಾರದಂದು ಆಯೋಜನೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಎನ್.ಐ.ಐ.ಟಿ ಪ್ರೋಗ್ರಾಮ್ ಅಡ್ವೈಸರಾದ ಶಶಿ ರಾಜ್ ಆರ್.ಅವರು ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಮುಗಿದ ಮೇಲೆ ಬ್ಯಾಂಕ್ ನಲ್ಲಿ ಯಾವ ರೀತಿ ಉದ್ಯೋಗಕ್ಕೆ ಆಯ್ಕೆ.ಹಾಗೂ ಬ್ಯಾಂಕ್ ನಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಹೇಮಲತಾ ಪಿ ಮತ್ತು ಐಕ್ಯೂಎಸ್ ಸಿ ಸಂಚಾಲಕರಾದ ಸೈಯದ್ ಬಾಬು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವಿನಯ್ ಕುಮಾರ್, ಸಹಾಯ ಪ್ರಾಧ್ಯಾಪಕಗಳು, ಹಾಗೂ ವಿದ್ಯಾರ್ಥಿಗಳು ಹಾಜರಾಗಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296