ಪಾವಗಡ: ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಎನ್.ಹಳ್ಳಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಕಂಡರೆ ಶಿಕ್ಷಣ ಇಲಾಖೆಯೇ ತಲೆ ತಗ್ಗಿಸುವ ಪರಿಸ್ಥಿತಿ ತಲೆದೋರಿದ್ದು ಶಿಕ್ಷಣ ಸಚಿವರಾದ ತವರು ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಒದಗಿ ಬಂದಿದ್ದು ಮಕ್ಕಳ ಜೀವ ಭಯದಿಂದ ಪಾಠ ಕೇಳುವಂತಗಿದ್ದು ಈ ಕೂಡಲೇ ಶಾಲೆಗೆ ಕೊಠಡಿಗಳನ್ನು ಒದಗಿಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಅಗ್ರಹಿಸಿದ್ದಾರೆ.
ಈ ಶಾಲೆಯಲ್ಲಿ ಸುಮಾರು 70 ವಿದ್ಯಾರ್ಥಿಗಳಿದ್ದು 1 ರಿಂದ 7 ನೇ ತರಗತಿಗೆ ಕೇವಲ ಮೂರು ಕೊಠಡಿಗಳಿದ್ದು ಇನ್ನುಳಿದ ಮೂರು ಕೊಠಡಿಗಳು ದುಸ್ಥಿತಿಯಲ್ಲಿದ್ದು ಪ್ರಾಣ ಭಯದಿಂದ ಪಾಠ ಪ್ರವಚನಗಳು ಕೇಳುವಂತಾಗಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದಂತ ಶಾಲೆ ಇಂದು ಇಂತಹ ದುರಸ್ತಿ ಒದಗಿ ಬಂದಿದ್ದು ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ, ಜನಪ್ರತಿನಿದಿಗಳ ಗಮನಕ್ಕೆ ಬಂದರು ಸಹ ದುರಸ್ತಿ ಕಾಣುತ್ತಿಲ್ಲ, ಲೋಕ ಸಭಾ ಸದಸ್ಯರ ನಿಧಿ , ಶಾಶಕರ ನಿದಿ ಅಥವಾ ಜಿಲ್ಲಾ ಪಂಚಾಯಿತಿ ಯಾವದಾದೊರಂದು ನಿಧಿಯಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸುವಂತೆ ಅಗ್ರಹಿಸಿ, ಸಂಬಂಧಪಟ್ಟವರು ನಿರ್ಲಕ್ಷ ವಹಿಸಿದ್ದಲ್ಲಿ ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ ಮೂಲಕ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಯುವ ಮುಖಂಡ ಅನಿಲ್, ಬೇಕರಿ ನಾಗರಾಜ, ಹಾಗೂ ಗ್ರಾಮದ ಯುವಕರು ಹಾಜರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700