ತಿಪಟೂರು: ಕಾಶ್ಮೀರದಲ್ಲಿ ನಡೆದ ಉಗ್ರವಾದಿಗಳ ರಣಹೇಡಿ ಕೃತ್ಯವನ್ನು ಖಂಡಿಸಿ ಪಕ್ಷಾತೀತವಾಗಿ ಸಮಸ್ತ ಹಿಂದುಬಾಂದವರು ಏಪ್ರಿಲ್ 28ರಂದು ಸೋಮವಾರ ತಿಪಟೂರು ಬಂದ್ ಗೆ ಕರೆ ನೀಡಿದ್ದಾರೆ.
ಹಿಂದುಪರ ಸಂಘಟನೆಯ ಒಕ್ಕೂಟದ ಶ್ರೀಶ ಮಾತನಾಡಿ, ಹಿಂದು ಸಮಾಜದ ಮೇಲೆ ಹತ್ಯೆ ಅತ್ಯಾಚಾರದಂತ ದೌರ್ಜನ್ಯ ಕೃತ್ಯಗಳು ನಡೆಯುತ್ತಿದ್ದು, ಹಿಂದೂ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ಆಗುವ ಸ್ಥಿತಿ ನಿರ್ಮಾಣವಾಗಿದೆ.
ಕಾಶ್ಮೀರದಲ್ಲಿ ನಡೆದ ಉಗ್ರವಾದಿಗಳ ಅಟ್ಟಹಾಸಕ್ಕೆ ಸಮಾಜ ಬೆಚ್ಚಿಬಿದ್ದಿದೆ. ಹಿಂದುಗಳು ಒಟ್ಟಾಗಿ ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ದಬ್ಬಾಳಿಕೆಗಳು ಹೆಚ್ಚಾಗಲಿವೆ ಎಂದು ಹೇಳಿದರು.
ಹಿಂದೂಪರ ಸಂಘಟನೆ ಮುಖಂಡ ಬಾಗೇಪಲ್ಲಿ ನಟರಾಜ್ ಮಾತನಾಡಿ, ಕಾಶ್ಮೀರದಲ್ಲಿ ನಡೆದ ದೌರ್ಜನ್ಯ ಇಸ್ಲಾಮಿಕ್ ಉಗ್ರಗಾಮಿಗಳು 28ಕ್ಕೂ ಹೆಚ್ಚು ಹಿಂದುಗಳ ಮೇಲೆ ಗುಂಡಿನ ದಾಳಿ ನಡೆಸಿರುವುದು ಉದ್ದೇಶಪೂರ್ವಕವಾಗಿದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಹಿಂದು ಪರ ಸಂಘಟನೆ ಮುಖಂಡರು ಹಿಂದೂ ಪರದ ಒಕ್ಕೂಟದ ತರಕಾರಿ ಗಂಗಾಧರ್ ಮಾಜಿನಗರ ಸಭೆ ಅಧ್ಯಕ್ಷ ರಾಮ್ ಮೋಹನ್ ಗೊರಗೊಂಡನಹಳ್ಳಿ ಸುದರ್ಶನ್ ಶಿವಪ್ರಕಾಶ್ ಶ್ರೀನಿವಾಸ್ ಇದ್ದರು
ವರದಿ: ಆನಂದ, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW