ಐಡಿಹಳ್ಳಿ: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ದಾರಿ ತಪ್ಪಿ ಕೆಟ್ಟಚಟಗಳಿಗೆ ಬಲಿಯಾಗುತ್ತಿದೆ. ಇದರಿಂದ ದೂರ ಇರಲು ಕ್ರೀಡೆಯಲ್ಲಿ ಭಾಗವಹಿಸಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಆರ್. ರಾಜೇಂದ್ರ ತಿಳಿಸಿದರು. ಅವರು ಐಡಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಐಡಿಹಳ್ಳಿ ಗ್ರಾಮದಲ್ಲಿ ಶಾಸಕ ಕೆ.ಎನ್.ರಾಜಣ್ಣರವರು ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡಿಸಲಿದ್ದು, ರಾಜ್ಯದಲ್ಲಿ ನಡೆದ ಉಪ ಚುನಾವಣೆ ಪ್ರಯುಕ್ತ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ಅರ್ಹರಿಗೆ ನಿವೇಶನಗಳ ಹಕ್ಕುಪತ್ರ ವಿತರಿಸುತ್ತಾರೆ. ಗಡಿಭಾಗದ ರಸ್ತೆ ಕಾಮಗಾರಿಗಳು ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿವೆ. ಶಾಸಕರು ತಾಲ್ಲೂಕಿಗೆ ಈಗಾಗಲೇ ಸುಮಾರು 1500 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ಇನ್ನೂ ಹೆಚ್ಚಿನ ಮನೆಗಳ ಮಂಜೂರಾತಿ ತರುವುದಾಗಿ ತಿಳಿಸಿದರು.
ಆರಕ್ಷಕ ನಿರೀಕ್ಷಕ ಹನುಮಂತರಾಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್‌ಬಾಬು, ವಿಎಸ್‌ಎಸ್ ಎನ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಮಾಜಿ ಅಧ್ಯಕ್ಷ ಶನಿವಾರಂ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ. ಗೋವಿಂದಯ್ಯ, ಮಾಜಿ ಅಧ್ಯಕ್ಷ ನರಸರೆಡ್ಡಿ, ಮುಖಂಡರಾದ ಶ್ರೀಧರರೆಡ್ಡಿ, ಸಿದ್ದಲಿಂಗಪ್ಪ, ಅನಿಲ್ ಕುಮಾರ್, ನವೀನ್‌ಕುಮಾರ್, ನಾಗರಾಜು ತಾಡಿ, ಶಿವರಂ ರಾಜಣ್ಣ, ಮೂರ್ತಿ, ವಕೀಲ ನರಸಿಂಹಮೂರ್ತಿ, ವಾಲಿಬಾಲ್ ಕ್ರೀಡಾಪಟುಗಳಾದ ಗಿರೀಶ್, ಸಚಿನ್, ಗೋಪಿ, ವೇಣು, ಜೆ.ಬಿ., ಆನಂದ್ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


