ಕೆಲ ದಿನಗಳಿಂದ ಬೆಂಗಳೂರಿನ ಜನರ ಮೊಬೈಲ್ ಗಳಿಗೆ ವಿದೇಶಿ ನಂಬರ್ ಗಳಿಂದ ಅಪರಿಚಿತ ಕರೆಗಳು ಬರುತ್ತಿದ್ದು, ವಾಟ್ಸಾಪ್ ಕರೆ ಮಾಡುತ್ತಿರುವ ಅಪರಿಚಿತ ವ್ಯಕ್ತಿಗಳು, ಪೊಲೀಸ್ ಠಾಣೆಯಿಂದ ಮಾತನಾಡ್ತಿದ್ದೇವೆ. ನಿಮ್ಮ ಮಗ ಅಥವಾ ಮಗಳನ್ನ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಮಾಡಿದ್ದೇವೆ. ಕೂಡಲೇ ನಮ್ಮ ಅಕೌಂಟ್ ಗೆ ಹಣ ಹಾಕಿ ಇಲ್ಲದಿದ್ರೆ, FIR ಮಾಡ್ತೀವಿ ಅಂತಾ ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದೇ ರೀತಿ ಬೆಂಗಳೂರಿನ ಸೈಯದ್ ಸಮೀನ್ ಎಂಬವರಿಗೂ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಗಳು ನಿಮ್ಮ ಮಗಳನ್ನ ಬಂಧಿಸಿದ್ದೇವೆ. ಹಣ ಹಾಕಿ ಅಂತಾ ಬೆದರಿಸಿದ್ದಾರೆ. ಸದ್ಯ ಸೈಯದ್ ಸಮೀನ್ ಈ ಬಗ್ಗೆ ಸೈಬರ್ ಕ್ರೈಂಗೆ ದೂರು ಸಲ್ಲಿಸಿದ ಬಳಿಕ ಇಂತಹ ಹಲವು ಪ್ರಕರಣಗಳು ಕೆಲದಿನಗಳಿಂದೀಚೆಗೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಮುಂಬೈಯಲ್ಲಿ ಇಂತಹದ್ದೇ ಪ್ರಕರಣ ನಡೆದು ಒಬ್ಬರು ಮಹಿಳೆ ಸುಮಾರು 8೦ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಇಂತಹ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಸೈಬರ್ ಪೊಲೀಸರಿಗೆ ತಿಳಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


