ತುಮಕೂರು: ತರಕಾರಿ ಬೆಲೆ ಮತ್ತೆ ಗಗನಕ್ಕೆ ಏರಿದ್ದು, ಇದೀಗ ಕೊತ್ತಂಬರಿ ಸೊಪ್ಪು ಬಿಟ್ಟರೆ ಬೇರೆಲ್ಲ ತರಕಾರಿಗಳು ದುಬಾರಿ ಎನ್ನುವಂತಾಗಿದೆ. ಈ ಪೈಕಿ ಕ್ಯಾಪ್ಸಿಕಂಗೆ ಭಾರೀ ಬೆಲೆ ಏರಿಕೆಯಾಗಿದ್ದು, ಒಂದು ಕೆ.ಜಿ. ಕ್ಯಾಪ್ಸಿಕಂಗೆ ಬರೊಬ್ಬರಿ 100 ರೂಪಾಯಿಗಳಾಗಿವೆ.
ಕ್ಯಾಪ್ಸಿಕಂ ಬೆಲೆ 100 ರೂ ಆಗಿದ್ದರೆ, ಚಿಲ್ಲರೆಯಾಗಿ ಇದು ಮಾರಾಟವಾಗುತ್ತಿರುವ ಸಂದರ್ಭದಲ್ಲಿ 120–140ರವರೆಗೂ ಹಣ ಪೀಕಿಸಲಾಗುತ್ತಿದೆ. ಇನ್ನೊಂದೆಡೆ ಹೂ ಕೋಸಿಗೆ ಕೂಡ ತೀವ್ರ ಬೆಲೆ ಏರಿಕೆಯಾಗಿದೆ. ಒಂದು ಹೂಕೋಸು ಬೆಲೆ 50 ರೂಪಾಯಿಗೂ ಅಧಿಕವಾಗಿ ಏರಿಕೆಯಾಗಿದೆ.
ಸದ್ಯ ತರಕಾರಿ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳು 80ರಿಂದ 100 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇನ್ನೊಂದು ಅಚ್ಚರಿಯ ವಿಚಾರ ಏನೆಂದರೆ, ಸೊಪ್ಪುಗಳಿಗೆ ಕೂಡ ಬೆಲೆ ಏರಿಕೆಯಾಗಿದೆ. ಇನ್ನೊಂದೆಡೆ ಮೀನು, ಮಾಂಸಗಳಿಗೂ ಬೆಲೆ ಏರಿಕೆಯಾಗಿದೆ.
ವಾಟ್ಸಾಪ್ ಗ್ರೂಪ್ ಸೇರಿ: