ಮೈಸೂರಿನ ವಿಶ್ವ ಮಾನವ ಸಂಗೀತ ಪ್ರತಿಷ್ಠಾನವು ಉತ್ತರ ಪ್ರದೇಶದ ವಾರಣಾಸಿ ಯ ಬನಾರಸ್ ಹಿಂದೂ ವಿವಿ ಯಲ್ಲಿ ನಾಲ್ವಡಿ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾದ ಹೆಚ್ ಎಲ್ ಯಮುನಾ ತಿಳಿಸಿದ್ದಾರೆ.
ಬನಾರಸ್ ವಿವಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹಾಯ ಮಾಡಿದ್ದರು.ಮತ್ತು ಸಹ ಸ್ಥಾಪಕ ರಾಗಿದ್ದಾರೆ ಹಾಗಾಗಿ ಅವರನ್ನು ಸ್ಮರಿಸಲು ಈ ಕಾರ್ಯಕ್ರಮ ಮಾಡುತಿದ್ದು ,ಕನ್ನಡದ ಖ್ಯಾತ ಗಾಯಕ ಲಕ್ಷ್ಮಿರಾಮ್ ರವರು 350 ಜನ ಕಲಾವಿದರನ್ನು ಜಾನಪದ ಅಕಾಡೆಮಿಯ ಸದಸ್ಯರಾದ ಲಕ್ಷ್ಮಿ ದೇವಮ್ಮ ರವರ ಸಹಕಾರ ದೊಂದಿಗೆ ನಾಲ್ವಡಿಗೀತೆ,ಶಿವನಗೀತೆ ದೇಶ ಭಕ್ತಿ ಗೀತೆ.ಕಂಸಾಳೆ. ಕೊಂಬು.ಕಹಳೆ.ಕೊಲಾಟ ಮುಂತಾದವುಗಳನ್ನು ಸಂಯೋಜನೆ ಮಾಡಿದ್ದಾರೆ.
ಕಾರ್ಯಕ್ರಮ 26 ಆಗಸ್ಟ್ ಮಧ್ಯಾಹ್ನ 3 ಗಂಟೆಗೆ ಬನಾರಸ್ ವಿವಿಯ ಪಂಡಿತ್ ರವಿ ಶಂಕರ್ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ ಎಂದರು.
ಅತಿಥಿಗಳಾಗಿ ಬಿಜಿಎಸ್ ವಾರಣಾಸಿ ಯ ಶ್ರೀ ವಿಜಯೆಂದರ್ ನಾಥ ಸ್ವಾಮೀಜಿ.ವಿಹನ್ಗಮ ಯೋಗ ದ ಮುಖ್ಯಸ್ಥ ರಾದ ಶ್ರೀಮತಿ ಸುನೀತಾ ಸಿಂಗ್.ಕರ್ನಾಟಕ ಖಾದಿ ಮಂಡಳಿ ಯ ಆಡಳಿತ ಮಂಡಳಿ ಸದಸ್ಯ ಎಂ ನರಸಿಂಹಮೂರ್ತಿ.ಡಾ. ಎಸ್ ಬಾಲಾಜಿ.ಡಾ. ಹನಿಯೂರು ಚಂದ್ರೆ ಗೌಡ ಬಾಗವಹಿಸುವರು.
ಪತ್ರಿಕಾಗೋಷ್ಟಿ ಯಲ್ಲಿ ವಿಶ್ವ ಮಾನವ ಸಂಗೀತ ಪ್ರತಿಷ್ಠಾನದ ಅಧ್ಯಕ್ಶೆ ಹೆಚ್ ಎಲ್ ಯಮುನಾ. ಗಾಯಕ- ಸಂಗೀತ ಸಂಯೋಜಕ ಲಕ್ಷ್ಮಿರಾಮ್.ಕಲಾವಿದರಾದ ಪದ್ಮ.ಗೀತಾ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy