ಪಾವಗಡ: ಪಾವಗಡ ತಾಲೂಕಿನ ರಂಗಸಮುದ್ರದಲ್ಲಿ ಸಿಡಿಲಿಗೆ ದನದ ಕೊಟ್ಟಿಗೆ ಹೊತ್ತಿ ಉರಿದ ಘಟನೆ ನಡೆದಿದೆ. ಒಂದು ಹಸು ಸಜೀವ ದಹನಗೊಂಡಿದ್ದು, ಮೂರು ಹಸುಗಳಿಗೆ ಗಾಯಗಳಾಗಿವೆ. ಈ ಹಸುಗಳು ರಂಗಸಮುದ್ರದ ಕರಿಯಪ್ಪ ಎನ್ನುವವರಿಗೆ ಸೇರಿದವಾಗಿವೆ.
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ವೇಳೆ ಸಿಡಿಲು ಅಬ್ಬರಿಸಿದ್ದು, ಕೊಟ್ಟಿಗೆಯಲ್ಲಿ ಮಲಗಿದ್ದ ಕರಿಯಪ್ಪ ಹಾಗೂ ಬಾಲಕ ಮಹಾಲಿಂಗನಿಗ ಗಾಯಗಳಾಗಿವೆ. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅರಸಿಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


