ಚೆನ್ನೈ : ತಮಿಳು, ತೆಲುಗು ಸಿನಿಮಾರಂಗದ ಸ್ಟಾರ್ ನಿರ್ದೇಶಕ ಪಿ.ಚಂದ್ರಶೇಖರ್ ರೆಡ್ಡಿ ಅವರು ಸೋಮವಾರ ನಿಧನರಾಗಿದ್ದಾರೆ. ಹಿರಿಯ ಸ್ಟಾರ್ ನಟರಾದ NTR , ನಾಗೇಶ್ವರ್ ರಾವ್ ರಂತಹವರಿಗೆ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ರೆಡ್ಡಿ ಅವರ ನಿಧನದಿಂದ ಸಿನಿಮಾರಂಗಕ್ಕೆ ಆಘಾತವಾಗಿದೆ. ಚಂದ್ರಶೇಖರ್ ರೆಡ್ಡಿ ಅವರು ಹಲವು ದಿನಗಳಿಂದಲೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
86 ವರ್ಷ ವಯಸ್ಸಾಗಿದ್ದ ಚಂದ್ರಶೇಖರ್ ರೆಡ್ಡಿ ಚೆನ್ನೈನಲ್ಲಿ ವಾಸವಾಗಿದ್ದರು. ಅಲ್ಲಿಯೇ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. 1959ರಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದ ಚಂದ್ರಶೇಖರ್ ರೆಡ್ಡಿ ಅವರು ತೆಲುಗು , ತಮಿಳಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿಗೆ, ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿದ್ರು. ಚಂದ್ರಶೇಖರ್ ನಿರ್ದೇಶನದ ಮೊದಲ ಸಿನಿಮಾ ‘ಅನುರಾಧ’. 1971ರಲ್ಲಿ ತೆರೆಕಂಡಿತ್ತು.
ಭಲೇ ಅಲ್ಲುಡು , ಮಾನವಡು ದಾನವುಡು , ರಗಿಲೇ ಗುಂಡೆಲು, ವಿಚಿತ್ರ ದಾಂಪತ್ಯಂ ಹೀಗೆ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳನ್ನ ಚಂದ್ರಶೇಖರ್ ರೆಡ್ಡಿ ನಿರ್ದೇಶಿಸಿದ್ದಾರೆ. 2014ರಲ್ಲಿ ಬಂದ ಜಗನ್ನಾಯಕುಡು ಚಂದ್ರಶೇಖರ್ ರೆಡ್ಡಿ ಅವರ ನಿರ್ದೇಶನದ ಕಡೆಯ ಸಿನಿಮಾ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy