ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆ ಅಡಿಯಲ್ಲಿ ನಿರ್ಮಾಣಗೊಂಡ, ಅಡವಿ ಸಿನಿಮಾ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚದ ಹಣ ಪಡೆಯುವಾಗ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಸೆನ್ಸಾರ್ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿಯಾಗಿದ್ದಾರೆ. ಡಾಕ್ಟರ್ ಬಿ.ಆರ್.ಅಂಬೇಡ್ಕರ್ ದೃಶ್ಯ ಹಾಗೂ ಸಬ್ ಟೈಟಲ್ ವಿಷಯಕ್ಕೆ ಕಿರಿಕ್ ತೆಗೆದಿದ್ದ ಅಧಿಕಾರಿ ನಂತರ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಬೇಸತ್ತು ಸಿಐಡಿ ಅಧಿಕಾರಿಗಳಿಗೆ ನಿರ್ದೇಶಕ ನಿರ್ಮಾಪಕ ಟೈಗರ್ ನಾಗ್ ದೂರು ನೀಡಿದ್ದರು. ಲಂಚ ಸ್ವೀಕರಿಸುವ ವೇಳೆ ಸಿಐಡಿ ಅಧಿಕಾರಿಗಳಿಗೆ ಪ್ರಶಾಂತ್ ಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಕೆ.ಮಂಜು
ಸಣ್ಣಪುಟ್ಟ ಕಣ್ತಪ್ಪಿಗೆ ಹೊಸ ನಿರ್ಮಾಪಕರನ್ನು ಟಾರ್ಗೆಟ್ ಮಾಡಿ, ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಹಣ ಪಿಕುತಿದ್ದ. ಒಂದು ವಾರದಿಂದ ಸೆನ್ಸಾರ್ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಸಿಬಿಐ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ನಿರ್ದೇಶಕ ನಿರ್ಮಾಪಕ ಟೈಗರ್ ನಾಗ್ ದೂರು ನೀಡಿದ್ದಾರೆ.
ಟೈಗರ್ ನಾಗ್, ಸಾಮಾಜಿಕ ಹೋರಾಟಗಾರ
ದೂರು ನೀಡುವ ಸಂದರ್ಭದಲ್ಲಿ ಟೈಗರ್ ನಾಗ್ ಗೆ ಆಸ್ಕರ್ ಕೃಷ್ಣ ಮಂಜುನಾಥ್, ಹರೀಶ್, ಸಿಬಿಐ ಕಚೇರಿಗೆ ತೆರಳಿ ಬೆಂಬಲ ನೀಡಿದರು. ಭ್ರಷ್ಟಾಧಿಕಾರಿಯ ದಾಳಿ ವೇಳೆ ಹತ್ತಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಸಿವಿಲ್ ಡ್ರಸ್ ನಲ್ಲಿ ಪ್ರತ್ಯಕ್ಷವಾಗಿದ್ದರು.