ಹೈದರಾಬಾದ್: ಚಾಲನಾ ಪರವಾನಗಿ ಪಡೆದ ದೇಶದ ಮೊದಲ ಕುಬ್ಜ ವ್ಯಕ್ತಿ ಎಂಬ ಹೆಗ್ಗಲಿಕೆಗೆ ಹೈದರಾಬಾದ್ ನಿವಾಸಿ ಪಾತ್ರರಾಗಿದ್ದು, ಕೇವಲ ಮೂರು ಅಡಿ ಎತ್ತರದ ವ್ಯಕ್ತಿ ತನ್ನ ಅಂಗವೈಕಲ್ಯವನ್ನು ಮೀರಿಸಿ ಸಾಧನೆ ಮಾಡಿದ್ದು, ಇದೀಗ ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ.
ಹೈದರಾಬಾದ್ ನಿವಾಸಿ ಗಟ್ಟಿಪಲ್ಲಿಯ 42 ವರ್ಷ ವಯಸ್ಸಿನ ಶಿವಪಾಲ್ ಅವರು ಈ ಸಾಧನೆ ಮಾಡಿದವರಾಗಿದ್ದು, ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ ತನ್ನಂತೆಯೇ ಇರುವ ಇನ್ನಷ್ಟು ಕುಬ್ಜ ವ್ಯಕ್ತಿಗಳಿಗೆ ಡ್ರೈವಿಂಗ್ ತರಬೇತಿ ನೀಡುವುದು ತನ್ನ ಮುಂದಿನ ಗುರಿ ಎಂದು ಅವರು ಹೇಳಿದ್ದಾರೆ.
ನನ್ನ ಎತ್ತರದ ಕಾರಣದಿಂದ ಅನೇಕ ಮಂದಿ ನನ್ನನ್ನು ಚುಡಾಯಿಸುತ್ತಿದ್ದರು. ಇಂದು ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಾಮನಿರ್ದೇಶನಗೊಂಡಿದ್ದೇನೆ. ಚಾಲನಾ ತರಬೇತಿಗಾಗಿ ಅನೇಕ ಕುಳ್ಳಗಿನ ಜನರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ದೈಹಿಕ ವಿಕಲಚೇತನರಿಗಾಗಿ ಮುಂದಿನ ವರ್ಷ ಡ್ರೈವಿಂಗ್ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700