ತುಮಕೂರು: ಛಲವಾದಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ದ 2022ನೇ ನೂತನ ವರ್ಷದ ಕ್ಯಾಲೆಂಡರ್ ನ್ನು ಮಾಜಿ ಸಚಿವರಾದ ಡಾ.H. C.ಮಹದೇವಪ್ಪನವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಸಹಕಾರಿಯ ಅಭಿವೃದ್ಧಿಗೆ ಷೇರುದಾರರು ಮತ್ತು ಆಡಳಿತ ಮಂಡಳಿ ಜೊತೆಯಾಗಿ ಸ್ಪಂದಿಸಿದಲ್ಲಿ ಸಹಕಾರಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ಸೌಹಾರ್ದ ಸಹಕಾರಿಗೆ ಶುಭ ಹಾರೈಸಿದರು .
ಇದೇ ಸಂದರ್ಭದಲ್ಲಿ ನೆಲಮಂಗಲ ಕ್ಷೇತ್ರದ ಶಾಸಕರಾದ ಡಾ.ಶ್ರೀನಿವಾಸಮೂರ್ತಿ ರವರು ಮಾತನಾಡಿ, ಛಲವಾದಿ ಪತ್ತಿನ ಸೌಹಾರ್ದ ಸಹಕಾರಿಯು ಎರಡನೇ ವರ್ಷ ದಲ್ಲಿ ಮುನ್ನೆಡೆಯುತ್ತಿರುವ ಬ್ಯಾಂಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಂಕ್ ಅಭಿವೃದ್ಧಿಗೆ ಸಮುದಾಯ ಸಹಕಾರ ಪಡೆದು ಮುನ್ನೆಡೆಯಿರಿ ಎಂದು ಸಲಹೆ ನೀಡಿ ಶುಭ ಕೋರಿದರು .
ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ತುಮಕೂರು ಛಲವಾದಿ ಪತ್ತಿನ ಸೌಹಾರ್ದ ಸಹಕಾರಿ ನಿ.ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy