ತುಮಕೂರು: ತುಮಕೂರು ಛಲವಾದಿ ಸೌಹಾರ್ದ ಪತ್ತಿನ ಸಹಕಾರಿ ನಿ.ದ 2ನೇ ಸರ್ವ ಸದಸ್ಯರ ಮಹಾಸಭೆ ಭಾನುವಾರ SVS ಶಾಲೆಯ ಸಭಾಂಗಣ ಬನಶಂಕರಿ ತುಮಕೂರುನಲ್ಲಿ ಸಂಘದ ಅಧ್ಯಕ್ಷರಾದ ಸಿ.ಭಾನುಪ್ರಕಾಶ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಶ್ರೀನಿವಾಸಯ್ಯ ರವರು ಆರೋಗ್ಯ ಇಲಾಖೆ ಆಡಳಿತ ಅಧಿಕಾರ (ನಿವೃತ್ತ ) ಡಾ.ಶಶಿಕಾಂತ್ ರವರು ಪಶುಇಲಾಖೆ .ಮತ್ತು ಚಂದ್ರಶೇಖರ್ ಉಪನ್ಯಾಸಕರು ಉಪಸ್ಥಿತರಿದ್ದರು .
ಸಭೆಯನ್ನುದ್ದೇಶಿಸಿ ಮಾತನಾಡಿದ, ಡಾ.ಶಶಿಕಾಂತ್, ಸಹಕಾರಿ ಅಭಿವೃದ್ಧಿಯಾಗಬೇಕಾದರೆ ಸದಸ್ಯರು ಸಾಲವನ್ನು ಪಡೆದು ತಮ್ಮ ವ್ಯಾಪಾರ ವ್ಯವಹಾರಗಳಿಗೆ ಬಳಸಿಕೊಂಡು ಬರುವ ಆದಾಯದಲ್ಲಿ ಉಳಿತಾಯ ಮಾಡಿ ಸಹಕಾರಿಯ ಸಾಲವನ್ನು ತೀರಿಸಲು ಪ್ರಾಮಾಣಿಕವಾಗಿ ಶ್ರಮಿಸಿದರೆ ಮಾತ್ರ ಸಾಧ್ಯ ಎಂದು ತಿಳಿಸಿದರು .
ಚಂದ್ರಶೇಖರನವರು ಮಾತನಾಡಿ, ಸಮುದಾಯದ ಏಳಿಗೆಗೆ ಸಹಕಾರಿ ಸಂಸ್ಥೆ ಗಳು ಅವಶ್ಯಕವಾಗಿ ಬೇಕಾಗಿದೆ ಎಂದರು.
ಅಧ್ಯಕ್ಷರಾದ ಭಾನುಪ್ರಕಾಶ ಅವರು ಮಾತನಾಡಿ, ನಮ್ಮ ಸಹಕಾರಿ ನಡೆದು ಬಂದ ಹಾದಿ ಹಾಗೂ ಮುಂದಿನ ಗುರಿಯ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸದಸ್ಯರ ಕುಟುಂಬದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಭೆಯನ್ನು ನಿರ್ದೇಶಕರಾದ ಪರಮೇಶ್ H.S. ರಂಗಯ್ಯ, ಗಿರಿಜೇಶ್, ನಡೆಸಿಕೊಟ್ಟರು ಸಹಕಾರಿಯ ನಿರ್ದೇಶಕರು ಸದಸ್ಯರು ಸಭೆಯಲ್ಲಿ ಹಾಜರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700