ಸರಗೂರು: ತಾಲ್ಲೂಕಿನ ಪಟ್ಟಣದಲ್ಲಿ ಹೃದಯ ಭಾಗದಲ್ಲಿ ಕ್ರೀಡಾಂಗಣ ಕೆಸರು ಗೆದ್ದೆಯಾಗಿ ಮಾರ್ಪಟ್ಟಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಇರುವ ಕ್ರೀಡಾಂಗಣವನ್ನು ಪಟ್ಟಣ ಪಂಚಾಯಿತಿರವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅಂಗಡಿಗಳಿಗೆ ಜಾಗವನ್ನು ನೀಡಿದ್ದರು. ಆದರೆ ಇದಾದ ಬಳಿಕ ಕ್ರೀಡಾಂಗವನ್ನು ಸ್ವಚ್ಛಗೊಳಿಸದೇ ಅದೇ ರೀತಿಯಾಗಿ ಬಿಟ್ಟು ಬಿಡಲಾಗಿದೆ ಎಂದು ಸ್ಥಳೀಯ ವಾಲಿಬಾಲ್ ಆಟಗಾರ ಕಾರಯ್ಯ ಸರಗೂರು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ವಾರ್ಡ್ ಸದಸ್ಯರು ಇದರ ಕ್ರೀಡಾಂಗಣ ಬಗ್ಗೆ ಗಮನ ಕೊಡದೆ ಇದ್ದರೆ. ಮುಂದಿನ ದಿನಗಳಲ್ಲಿ ಕ್ರೀಡಾಂಗಣ ಯಾರೂ ಕೇಳುವವರಿಲ್ಲದೇ ಕೊಂಪೆಯಾಗಿ ಮಾರ್ಪಟ್ಟು, ಶಾಲೆಯ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಆಟಗಾರರು ಆಡಲು ಸರಿಯಾದ ಕ್ರೀಡಾಂಗಣ ಇಲ್ಲದೇ ಪರದಾಡುವ ಸ್ಥಿತಿಗೆ ತಲುಪಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ರೀಡಾಂಗಣದ ಪಕ್ಕದಲ್ಲಿ ಪೈಪ್ ಲೈನ್ ಇದ್ದು, ಪೈಪ್ ಲೈನ್ ಹೊಡೆದು ಹೋಗಿ ಕ್ರೀಡಾಂಗಣದಲ್ಲಿ ನೀರು ತುಂಬಿದೆ. ಆದರೆ ಇದನ್ನು ಸರಿಪಡಿಸದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದರೂ ಸರಿಯಾದ ಕ್ರಮವನ್ನು ಕೈಗೊಂಡಿಲ್ಲ ಎಂಧು ಭಜರಂಗಿ ದಳದ ಕ್ರಿಕೆಟ್ ಆಟಗಾರ ಆಭಿ ಸರಗೂರು ಹೇಳಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700