ತುಮಕೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಯಾರು ಅಭ್ಯರ್ಥಿ ಆಗಲಿದ್ದಾರೆ ಎಂಬುದಲ್ಲ, ಅಂತಿಮವಾಗಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕೇಂದ್ರ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರುಚನ್ನಪಟ್ಟಣದಲ್ಲಿ ಅಷ್ಟೇ ಅಲ್ಲ ಉಪಚುನಾವಣೆ ಜೊತೆಗೆ ಸಂಡೂರು, ಶಿಗ್ಗಾವಿ ಸೇರಿ ಮೂರು ಕಡೆ ಉಪಚುನಾವಣೆ ನಡೆಯಬೇಕಿದೆ.ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದರು.
ಬಿಜೆಪಿ ರಾಜ್ಯನಾಯಕರು, ನಮ್ಮ ಜೆಡಿಎಸ್ ರಾಜ್ಯ ನಾಯಕರು ಸೇರಿ ಚರ್ಚೆ ಮಾಡುತ್ತಿದ್ದಾರೆ. ಸಿ.ಪಿ ಯೋಗೇಶ್ವರ್ ಗೆ ಟಿಕೆಟ್ ವಿಚಾರದಲ್ಲಿ ಸೂಕ್ತವಾದ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಚರ್ಚೆಗಳು ಆಗಬೇಕಾಗುತ್ತೆ. ಆಗ ಫಲಿತಾಂಶ ನಮ್ಮ ಪರ ಬರಲು ಸಾಧ್ಯ. ಅಂತಿಮವಾಗಿ ಎನ್ ಡಿಎ ಅಭ್ಯರ್ಥಿಯಾಗಿರುತ್ತೆ. ಜೆಡಿಎಸ್- ಬಿಜೆಪಿ ಚರ್ಚೆಯಿಲ್ಲ, ಒಟ್ಟಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ಹಾಗಾಗಿ ಎನ್ ಡಿಎ ಅಭ್ಯರ್ಥಿ ಕಣದಲ್ಲಿ ಇರಲಿದ್ದಾರೆ ಎಂದರು.
ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್ ಗೆ ಹುಮ್ಮಸ್ಸು ಹೆಚ್ಚಿದೆ, ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಮೈತ್ರಿ ಒಪ್ಪಿದ್ದಾರೆ. ಹೆಚ್ಚು ಸಂಸದರನ್ನ ಆಯ್ಕೆ ಮಾಡಿ ಪ್ರಧಾನಿ ಮೋದಿಗೆ ಕೊಡುಗೆ ನೀಡಿದ್ದಾರೆ ಎಂದರು.
ತುಮಕೂರಿನಲ್ಲಿ ವಿ.ಸೋಮಣ್ಣ ಗೆದ್ದಿದ್ದಾರೆ. ಮಂತ್ರಿಗಳಾಗಿ ಕೆಲಸ ಮಾಡ್ತಿದ್ದಾರೆ. ಸ್ಥಳೀಯ ಚುನಾವಣೆ, ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋಗ್ತಿವಿ ಎಂದರು.
ನಟ ದರ್ಶನ ಕೊಲೆ ಪ್ರಕರಣ ವಿಚಾರದಲ್ಲಿ ಈ ಬಗ್ಗೆ ನಾನು ಹೆಚ್ಚಾಗಿ ಮಾತನಾಡಲ್ಲ. ಕಾನೂನುಗಿಂತ ಯಾರು ದೊಡ್ಡವರಲ್ಲ. ಕಾನೂನಿಗೆ ಎಲ್ಲಾರು ಕೂಡ ತಲೆಬಾಗಬೇಕು ಎಂದರು.
ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಏನಿಲ್ಲ.ದರ್ಶನ್ ಅಭಿಮಾನಿಗಳಿಗೆ ಏನು ಹೇಳಲ್ಲ ಎಂದರು.
ತುಮಕೂರಿನಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪಕ್ಷದ ಸಂಘಟನೆ ಕುರಿತು ಸರಣಿ ಸಭೆಗಳು ನಡೆದಿವೆ ಎಂದರು.
ತುಮಕೂರು ಜಿಲ್ಲೆಗೆ ಸಂಬಂಧಿಸಿದ್ದಂತೆ ಸದಸ್ಯತ್ವ ನೋಂದಣಿ, ಬೂತ್ ಕಮಿಟಿ ರಚನೆ ಸಭೆ ನಡೆಯುತ್ತಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


