ಸರಗೂರು: ಲಂಕೆ ಗ್ರಾಮದಲ್ಲಿ ಚರಂಡಿ ನೀರು ಮನೆಗೆ ನುಗ್ಗುತ್ತಿರುವ ವಿಚಾರವಾಗಿ ನಮ್ಮತುಮಕೂರು ಮಾಧ್ಯಮದ ವರದಿಯ ಬೆನ್ನಲ್ಲೇ ಗ್ರಾಮ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಚರಂಡಿ ಸ್ವಚ್ಛತೆಗೊಳಿಸಿದ್ದಾರೆ.
ಸರಗೂರು ತಾಲ್ಲೂಕಿನ ಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಬರುವ ಲಂಕೆ ಗ್ರಾಮದಲ್ಲಿ ವರ್ಷದ ಆರಂಭದಲ್ಲಿ ಮಳೆಯಾದ ಕಾರಣ, ಚರಂಡಿಯಲ್ಲಿ ನೀರು ನಿಂತು ಮನೆಗಳಿಗೆ ನುಗ್ಗಿದ್ದವು. ಈ ಸಂಬಂಧ ವಿವರವಾದ ವರದಿಯನ್ನು ನಮ್ಮ ತುಮಕೂರು ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಚರಂಡಿ ಸ್ವಚ್ಛಗೊಳಿಸಿದ್ದಾರೆ.
ಪಂಚಾಯತ್ ಕೈಗೊಂಡಿರುವ ಕ್ರಮದಿಂದಾಗಿ ಇದೀಗ ಗ್ರಾಮದ ಜನರು ನಿಟ್ಟುಸಿರುವ ಬಿಟ್ಟಿದ್ದು, ಇದೇ ವೇಳೆ ಸಮಸ್ಯೆಯನ್ನು ವರದಿ ಮಾಡಿ, ಅಧಿಕಾರಿ, ಜನಪ್ರತಿನಿಧಿಗಳಿಗೆ ತಲುಪಿಸಿದ ನಮ್ಮ ತುಮಕೂರು ಮಾಧ್ಯಮಕ್ಕೆ ಸ್ಥಳೀಯ ಯುವ ಮುಖಂಡ ಶಿವರಾಜ್ ಧನ್ಯವಾದ ತಿಳಿಸಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5