ಪಾವಗಡ: ತಾಲೂಕಿನ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹರಿಹರಪುರ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಪ್ರಾಂಶುಪಾಲರಾದ ಪಾತಲಿಂಗಪ್ಪ ಮಾತನಾಡಿ, ಶಿವರಾತ್ರಿ ಹಬ್ಬದ ಪ್ರಯುಕ್ತದಿಂದ ಶ್ರೀ ಸಿದ್ಧೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣೋತ್ಸವದಿಂದ ಕೊನೆತನಕ ಮಹಾಮಂಡಲ ದಿನದವರೆಗೂ ಎಂಟು ದಿನಗಳವರೆಗೂ ಹಬ್ಬವನ್ನು ಆಚರಣೆ ಮಾಡುತ್ತಾ ನಾವು ಬಂದಿದ್ದೇವೆ. ಇವತ್ತು ವಿಶೇಷವಾಗಿ ಕಲ್ಲುಗಾಲ್ಲಿನ ರಥೋತ್ಸವವನ್ನು ಈ ದೇವಸ್ಥಾನದ ಹರಿಹರಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವಕ್ಕೆ ಅಕ್ಕ ಪಕ್ಕದ ಗ್ರಾಮದ ಎಂಟು ಹಳ್ಳಿಗಳಿಂದ ಭಕ್ತರು ಬಂದು ಸ್ವಾಮಿಗೆ ಪಾತ್ರರಾಗಿರುತ್ತಾರೆ ಎಂದರು.
ಭಕ್ತಾದಿಗಳು ರಥೋತ್ಸವವನ್ನು ಮುಂದಕ್ಕೆ ಎಳೆದು ಮತ್ತೆ ಸಾಯಂಕಾಲ ಅದೇ ಜಾಗಕ್ಕೆ ರಥವನ್ನು ಎಳೆಯುತ್ತಾರೆ, ಈ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿರುವುದರಿಂದ ತಾಲೂಕಿನ ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಯವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ರಾಮಲಿಂಗಪ್ಪ, ಅರುಂಧತಿ ನಾಗಲಿಂಗಪ್ಪ ಗ್ರಾಮ ಪಂಚಾಯತ್ ಸದಸ್ಯ, ದೊಡ್ಡಣ್ಣ ಗ್ರಾಮ ಪಂಚಾಯತ್ ಸದಸ್ಯ ಹರಿಹರಪುರ, ಮೂಡಲಗಿರಿಯಪ್ಪ, ರಾಘವೇಂದ್ರ ಪೆಮ್ಮನಹಳ್ಳಿ, ಕರಿಯಣ್ಣ ಅಂಗಡಿ, ಗೋಪಾಲ್ ರೆಡ್ಡಿ ಕೊತ್ತೂರು, ಮಲ್ಲಿಕಾರ್ಜುನ ಸಿಎಂ ದೇವಸ್ಥಾನ ಕಮಟ್ಟಿ ಸದಸ್ಯ, ರಮೇಶ ಮುಖ್ಯ ಶಿಕ್ಷಕರು, ಷಣ್ಮುಖ ಆರಾಧ್ಯ ಕಂದಾಯ ಇಲಾಖೆ, ವೆಂಕಟೇಶ್ ಕಾಂಟ್ರಾಕ್ಟರ್, ರಾಮೇಗೌಡ, ರಾಮಚಂದ್ರಪ್ಪ, ನರಸಿಂಹ ನಾಯಕ, ಸೋಲಾರ್ ಅಶ್ವಥ್, ಪ್ರಭಾಕರ್ ಶೆಟ್ಟಿ, ಶ್ರೀನಿವಾಸ ಗ್ರಾಮದ ಮುಖಂಡ, ಯರ್ರಪ್ಪ ಕೆಇಬಿ, ಇನ್ನು ಅನೇಕ ಅಕ್ಕಪಕ್ಕದ ಗ್ರಾಮಸ್ಥರು ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದರು.
ವರದಿ: ರಾಮಪ್ಪ ಸಿ.ಕೆ. ಪುರ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


