ಬೆಂಗಳೂರು: ಹುಲಿ ಉಗುರು ಫೆಂಡೆಂಟ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕರ್ನಾಟಕ ಜುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ ಆಗ್ರಹಿಸಿದ್ದಾಾರೆ.
ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹುಲಿ ಉಗುರು ಫೆಂಡೆಂಟ್ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆಭರಣ ಮಾಲೀಕರಿಗೆ ಕಿರುಕುಳ ನೀಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಚಿನ್ನಾಭರಣ ಅಂಗಡಿಗಳ ಮಾಲೀಕರು ಮತ್ತು ಅಕ್ಕಸಾಲಿಗರು ಭಯ ಭೀತರಾಗಿದ್ದು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಸರ್ಕಾರ ಹಲವು ವಿಚಾರಗಳಲ್ಲಿ ವೈಫಲ್ಯ ಕಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾವೇರಿ ವಿಚಾರ ದ್ವನಿಸುತ್ತಿದೆ.ನಾಡಿನ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಹಿನ್ನೆಲೆಯಲ್ಲಿ ಇದೀಗ ಅರಣ್ಯ ಇಲಾಖೆ ಹುಲಿಉಗುರಿನ ಫೆಂಡೆಂಟ್ ವಿಚಾರವನ್ನು ಕೆದುಕಿ ಜನರನ್ನು ದಿಕ್ಕು ತಪ್ಪಿಸಲು ಹೊರಟಿದೆ. ಹಿಂದೂ ಧರ್ಮದ ಆರ್ಚಕರನ್ನು, ಸಿನಿಮಾ ತಾರೆಯರನ್ನು, ರಾಜಕಾರಣಿಗಳನ್ನು ಟಾರ್ಗೆಟ್ ಮಾಡಲಾಗಿದೆ. ವನ್ಯಜೀವಿ ಕಾಯ್ದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸದೇ ದಿಢೀರ್ ದಾಳಿ ನಡೆಸಲಾಗುತ್ತಿದೆ ಎಂದು ದೂರಿದರು.
ಅರಣ್ಯ ಇಲಾಖೆಯ ಅಧಿಕಾರಿಗಳ ಹುಲಿ ಉಗುರಿನ ಫೆಂಡೆಂಟ್ ಬಗ್ಗೆ ಆಭರಣ ಮಾಲೀಕರಿಗೆ ನೋಟಿಸ್ ನೀಡದೆ ಏಕಾ ಏಕಿ ದಾಳಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನೋಟಿಸ್ ನೀಡದೆ ಅರಣ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಬಾರದು. ಪೆಂಡೆಂಟ್ ವಿಚಾರದಲ್ಲಿ ವಜ್ರಾಭರಣ ಅಂಗಡಿಗಳ ಮಾಲೀಕರಿಗೆ ಮಾನಸಿಕ ಕಿರುಕುಳ ನೀಡಿದರೆ. ರಾಜ್ಯವ್ಯಾಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ಕೊಡಬೇಕಾದಿತು ಎಂದು ಎಚ್ಚರಿಸಿದರು.
ಕಾನೂನು ಎಲ್ಲರಿಗೂ ಸಮಾನ ಎಂದು ಹೇಳುತ್ತಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಲಿ. ಅರಣ್ಯ ಉತ್ಪನ್ನ ಹೊಂದಿರುವ ವ್ಯಕ್ತಿಗಳು ತಾವಾಗಿಯೇ ಅದನ್ನು ಸರ್ಕಾರಕ್ಕೆ ವಾಪಸ್ ನೀಡಲು ಒಂದು ಗಡುವು ನೀಡಲಿ. ಜನರಿಗೆ ತಿಳುವಳಿಕೆ ನೀಡದೆ ಸಾರ್ವಜನಿಕರ ಮೇಲೆ ದಾಳಿ ನಡೆಸಿ, ಮೊಕದ್ದಮೆ ಹೂಡಲು ಹೊರಟಿರುವುದು ಸರಿಯಲ್ಲ. ಹುಲಿ ಉಗುರು ಸೇರಿದಂತೆ ಕೆಲ ವನ್ಯಜೀವಿ ಉತ್ಪನ್ನಗಳಿಗೆ ಬಂಗಾರದ ಅಲಂಕಾರಿಕ ವಿನ್ಯಾಸ ಮಾಡುವ ಸಂಪ್ರದಾಯವಿದೆ. ಇದನ್ನು ಬಂಗಾರದ ಕವಚನದಿಂದಲೂ ಅಲಂಕಾರ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಚಿನ್ನಾಭರಣ ಮಾರಾಟಗಾರರ ಮೇಲೆ ಕ್ರಮ ಜರುಗಿಸಲು ಹೊರಟಿರುವುದು ಸರಿಯಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಪುತ್ರ ಹಾಗೂ ಜೆಡಿಎಸ್‌ನ ಯುವ ನಾಯಕ ನಿಖಿಲ್ ಕುಮಾರ ಸ್ವಾಮಿ ಧರಿಸಿರುವ ಹುಲಿ ಉಗುರಿನ ಫೆಂಡೆಂಟ್ ಅಸಲಿ ಅಲ್ಲ.
ಅದು ಪ್ಲಾಸ್ಟಿಕ್ ಆಗಿದೆ. ಆ ಪ್ಲಾಸ್ಟಿಕ್ ಪೆಂಡೆಂಟ್ ನೂರು ರೂಪಾಯಿ ಬೆಲೆಬಾಳುತ್ತದೆ. ಇದನ್ನು ನಿಖಿಲ್ ಕುಮಾರ ಸ್ವಾಮಿ ಅವರಿಗೆ ಮದುವೆ ವೇಳೆ ಅವರ ಸಂಬಂಧಿಕರು ಉಡುಗೊರೆ ನೀಡಿದ್ದಾರೆ. ವಜ್ರ ಮತ್ತು ಬಂಗಾರ ಲೆಪಿತ ಪೆಂಡೆಂಟ್ ಆದಾಗಿತ್ತು. ಅದನ್ನು ನಾನೇ ಖುದ್ದಾಗಿ ಪರಿಶೀಲನ ಮಾಡಿದ್ದೇನೆ ಎಂದು ಹೇಳಿದರು.
ಈ ವೇಳೆ ಇಂಡಿಯನ್ ಜ್ಯೂವೆಲರಿ ಅಸೋಸಿಯೇಷನ್ ಉಪಾಧ್ಯಕ್ಷ ಚೇತನ್ ಕುಮಾರ್ ಮೆಹ್ತಾ, ಬೆಂಗಳೂರು ಜ್ಯೂವೆಲರಿ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಗನ್ನಾ, ಸುಮೇಶ್ ವಡೇರಾ ಸೇರಿದಂತೆ ಮತ್ತತಿರರು ಉಪಸ್ಥಿತರಿದ್ದರು.


