ಚಿಕಿತ್ಸೆಗೆಂದು ಬಂದಿದ್ದ ವಿವಾಹಿತೆಯನ್ನು ಬಾಬಾ ಪಟಾಯಿಸಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಮಹಮದ್ ಅಫ್ಘಾನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೈಸೂರಿನ ಬಾಬಾ ಖುರ್ರಾಂ ಪಾಷಾ ಎಂಬಾ ನಕಲಿ ಬಾಬಾನ ಬಳಿ ಚಿಕಿತ್ಸೆ ಪಡೆಯಲು ಹೋಗುತ್ತಿದ್ದಾಗ ಚಿಕಿತ್ಸೆ ನೆಪದಲ್ಲಿ ಪತ್ನಿ ತಾನ್ಜೇನಿಯಾ ಕೌಸರ್ ಳನ್ನು ಖುರ್ರಾಂ ಪಾಷಾ ತನ್ನ ಬಲೆಗೆ ಬೀಳಿಸಿಕೊಂಡಿದ್ದನಂತೆ. ಮನನೊಂದ ಮಹಮದ್ ಅಫ್ಘಾನ್ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ.
ತನ್ನ ಸಾವಿಗೆ ಮೈಸೂರಿನ ಡೋಂಗಿ ಬಾಬಾ ಖುರ್ರಾಂ ಪಾಷಾ ಮತ್ತು ಈತನ ಇಬ್ಬರು ಸಹಚರರೂ ಕಾರಣ. ನನ್ನ ಪತ್ನಿಯ ತಲೆ ಕೆಡಿಸಿ ಡೋಂಗಿ ಬಾಬಾಗೆ ತಲೆಹಿಡಿದಿದ್ದಾರೆ. ಇವರನ್ನ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಬರೆದು ಸಹಿ ಮಾಡಿ ನೇಣು ಹಾಕಿಕೊಂಡಿದ್ದು ಈ ಸಂಬಂಧ ಮೃತನ ಸಂಬಂಧಿಕರು ದೂರು ನೀಡಿದ್ದಾರೆ. ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


