ಪಾವಗಡ: ಅಪಘಾತದಲ್ಲಿ ತಮ್ಮೆರಡು ಕಾಲುಗಳನ್ನು ಕಳೆದುಕೊಂಡಿರುವ ಕೆ.ಟಿ.ಹಳ್ಳಿ ಗ್ರಾಮದ ಹನುಮಂತರಾಯಪ್ಪ ಅವರಿಗೆ ಪಾವಗಡ ತಾಲ್ಲೂಕಿನ ಸಮಾಜ ಸೇವಕರಾದ ನೇರಳೆ ಕುಂಟೆ ನಾಗೇಂದ್ರ ಕುಮಾರ್ ಆರ್ಥಿಕ ನೆರವು ನೀಡಿದರು.
ಅತ್ಯಂತ ಕಡುಬಡತನದಲ್ಲಿರುವ ಹನುಮಂತರಾಯಪ್ಪನವರು ತೀವ್ರ ಸಂಕಷ್ಟದಲ್ಲಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಕೂಡ ಆರ್ಥಿಕವಾಗಿ ಅಶಕ್ತರಾಗಿದ್ದಾರೆ. ಈ ಮಾಹಿತಿ ಪಡೆದ ನೇರಳೆ ಕುಂಟೆ ನಾಗೇಂದ್ರ ಕುಮಾರ್, ಹನುಮಂತರಾಯಪ್ಪ ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy