ಚಿಕ್ಕನಾಯಕನಹಳ್ಳಿ: ದೇವಾಲಯದೊಳಗೆ ನುಗ್ಗಿರುವ ಕಳ್ಳರು, ದೇವಸ್ಥಾನದೊಳಗಿದ್ದ ದೇವರ ಮೂರ್ತಿ ಸಹಿತ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆಂಕೆರೆಯಲ್ಲಿ ನಡೆದಿದೆ.
ಕೆಂಕೆರೆಯಲ್ಲಿರುವ ಕಾಳಮ್ಮ ದೇವಸ್ಥಾನಕ್ಕೆ ನುಗ್ಗಿರುವ ಕಳ್ಳರು, ಕಾಳಮ್ಮ ದೇವರ 3 ಬಂಗಾರದ ಮುಖ ಪದ್ಮ, ಛತ್ರಿ, ದೇವಸ್ಥಾನದ ಹುಂಡಿಯನ್ನು ಕದ್ದೊಯ್ದಿದ್ದಾರೆ. ಕಳವಾಗಿರುವ ವಸ್ತುಗಳ ಒಟ್ಟು ಮೌಲ್ಯ 2.50 ಕೋಟಿ ಎಂದು ಹೇಳಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತುಮಕೂರು ಡಿಸಿ, ಎಸ್ ಪಿ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ದೇವರನ್ನು ಕೂರಿಸುವ ಹಲಗೆಯೊಂದನ್ನು ಬಿಟ್ಟು ಬೇರೆಲ್ಲ ವಸ್ತುಗಳನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1