ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಆಸ್ಪತ್ರೆಯಿಂದ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ನವಜಾತ ಶಿಶು ಅಪಹರಣ ಪ್ರಕರಣದಲ್ಲಿ ಈಗಾಗಲೇ ಶಿಕ್ಷೆಗೊಳಗಾಗಿದ್ದ 65 ವರ್ಷದ ವ್ಯಕ್ತಿ ಮತ್ತು ಇತರ ಮೂವರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಶಮಿನ್ ಇಸ್ಮಾಯಿಲ್ (25), ಇಸ್ಮಾಯಿಲ್ ಯಾಕೋಬ್ ಸಬ್ (65), ಬಾಷಾ ಸಾಬ್ (55) ಮತ್ತು ಬಸವರಾಜ ಸಜ್ಜನ್ (43) ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬರಾದ ಸಜ್ಜನ್ ದತ್ತು ಪಡೆಯಲು ಬಿಐಎಂಎಸ್ ಆಸ್ಪತ್ರೆಯ ಬಳಿ ವಾಸವಿದ್ದ ಇಸ್ಮಾಯಿಲ್ ಅವರನ್ನು ಸಂಪರ್ಕಿಸಿದ್ದು, ಆರೋಪಿಗಳು ದತ್ತು ಬದಲು ಮಗುವನ್ನು ಅಪಹರಣ ಮಾಡುವ ಸಲಹೆ ನೀಡಿದ್ದಾರೆ.
ಇದರಂತೆ ಇಸ್ಮಾಯಿಲ್ ಮಗುವನ್ನು ಅಪಹರಿಸಿ ಸೆಪ್ಟೆಂಬರ್ 12 ರಂದು ಆರೋಗ್ಯ ತಪಾಸಣೆಗಾಗಿ ಬಿಐಎಂಎಸ್ ಗೆ ಬಂದಿದ್ದ ಸಜ್ಜನ್ ಗೆ ರೂ.1.5 ಲಕ್ಷಕ್ಕೆ ಮಾರಾಟ ಮಾಡಿದ್ದ.
ಈ ನಡುವೆ ಮಗು ಅಪಹರಣ ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಎಸ್ ಪಿ ಶೋಭಾ ರಾಣಿ ವಿಜೆ ಅವರು ಪ್ರಕರಣವನ್ನು ಬೇಧಿಸಿದ್ದು, ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC