ನವದೆಹಲಿ: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.
ELCIA ಟೆಕ್ ಶೃಂಗಸಭೆ 2024 ರಲ್ಲಿ ಮಾತನಾಡಿದ ಅವರು, ಭಾರತವು ಚೀನಾವನ್ನು ಹಿಂದಿಕ್ಕಿ ಜಾಗತಿಕ ಉತ್ಪಾದನಾ ಕೇಂದ್ರವಾಗುವುದು ಸುಲಭವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಚೀನಾ ನಮ್ಮ ದೇಶಕ್ಕಿಂತ ಆರು ಪಟ್ಟು ಹೆಚ್ಚಿನ ಜಿಡಿಪಿ(GDP)ಯನ್ನು ಹೊಂದಿದ್ದು, ಅದರ ಉತ್ಪಾದನಾ ಸಾಮರ್ಥ್ಯವನ್ನು ಮ್ಯಾಚ್ ಮಾಡಲು ಭಾರತಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಚೀನಾವನ್ನು ಹಿಂದಿಕ್ಕಿ ಜಾಗತಿಕ ಉತ್ಪಾದನಾ ಕೇಂದ್ರವಾಗುವುದು ಸುಲಭವಲ್ಲ, ಹಾಗಾಗಿ “ಹಬ್” ಮತ್ತು “ವಿಶ್ವ ಗುರು” ನಂತಹ ಭವ್ಯವಾದ ಪದಗಳನ್ನು ಸುಖಾ ಸುಮ್ಮನೆ ಬಳಸದಂತೆ ಅವರು ಸಲಹೆ ನೀಡಿದರು.
ಐಟಿ ವಲಯವು ರಫ್ತಿನ ಮೇಲೆ ಅವಲಂಬಿತವಾಗಿರುವಾಗ, ಉತ್ಪಾದನಾ ಉದ್ಯಮಕ್ಕೆ ಹೆಚ್ಚಿನ ದೇಶೀಯ ಕೊಡುಗೆ ಮತ್ತು ಸರ್ಕಾರದ ಬೆಂಬಲದ ಅಗತ್ಯವಿದೆ. ಉತ್ಪಾದನೆಗೆ ದೇಶೀಯ ಕೊಡುಗೆ ಹೆಚ್ಚು. ಉತ್ಪಾದನೆಯ ಯಶಸ್ಸಿನಲ್ಲಿ ಸರ್ಕಾರವು ದೊಡ್ಡ ಪಾತ್ರವನ್ನು ವಹಿಸುತ್ತದೆ. ದುರದೃಷ್ಟವಶಾತ್, ಭಾರತದಂತಹ ದೇಶದಲ್ಲಿ ಉತ್ತರದಾಯಿತ್ವ, ಪಾರದರ್ಶಕತೆ, ವೇಗ ಮತ್ತು ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಯು ಇನ್ನೂ ಸುಧಾರಣೆಯ ಅಗತ್ಯವಿದೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಮತ್ತು ಉದ್ಯಮದ ನಡುವೆ ಕನಿಷ್ಠ ಹಸ್ತಕ್ಷೇಪದ ಅಗತ್ಯವಿದೆ ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA