ಬೀಜಿಂಗ್: ಮುಂದಿನ ಎರಡು ಅಥವಾ ಮೂರು ತಿಂಗಳು ಕೋವಿಡ್-19 ಸೋಂಕಿನ ಹಾವಳಿ ಏರುಗತಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಶೇ. 80 ರಷ್ಟು ಜನತೆಗೆ ಸೋಂಕು ತಗುಲಿದೆ ಎಂದು ಚೀನಾ ತಿಳಿಸಿದೆ.
ಚೀನಾದಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯೂ ಇದೆ. ಆದರೆ 2ನೇ ಅಲೆ ಹರಡುವ ನಿರೀಕ್ಷೆ ಇಲ್ಲ ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ ಪ್ರಿವೆನ್ಷನ್‌ನ ಮುಖ್ಯ ವಿಜ್ಞಾನಿ ವೂ ಜುನಾವೊ ತಿಳಿಸಿದ್ದಾರೆ.
ಜನವರಿ 12-13ರ ಅವಧಿಯಲ್ಲಿ ಚೀನಾದಲ್ಲಿ 12,658 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದೆ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


