ಸರಗೂರು. ಥ್ರೋಬಲ್ ನಲ್ಲಿ ಚಿನ್ನದ ಪದಕ ಪಡೆದ ಇಬ್ಬರು ಹೆಣ್ಣು ಶಾಲೆಯ ಮಕ್ಕಳಿಗೆ ಸರ್ವೇ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮತ್ತು ಸಮಾಜ ಸೇವಕ ಎಸ್.ವಿ.ವೆಂಕಟೇಶ್ ಸನ್ಮಾನಿಸಿದರು.
ತಾಲ್ಲೂಕಿನ ಪಟ್ಟಣದ ಸರಗೂರು ಸರ್ವೇ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಎಸ್ ವಿ ವೆಂಕಟೇಶ್ ಥ್ರೋಬಾಲ್ ನಲ್ಲಿ ಚಿನ್ನದ ಪದಕ ಗೆದ್ದ ಇಟ್ನಾ ಗ್ರಾಮದ ಕುಮಾರಿ ವಿದ್ಯಾ ಮತ್ತು ಸಹನ ಅವರಿಗೆ ಸನ್ಮಾನ ಮಾಡಿದರು.
ಕುಮಾರಿ ವಿದ್ಯಾ ಮತ್ತು ಸಹನ ಅವರು ಥ್ರೋಬಾಲ್ ನಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ತಾಲ್ಲೂಕಿಗೆ ಸಂತೋಷದ ವಿಷಯವಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿ ಹಾಗೂ ಓದಿನಲ್ಲಿ ಆಸಕ್ತಿ ತೋರಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು. ಜೊತೆಗೆ ನಮ್ಮ ತಾಲ್ಲೂಕಿನ ಮಕ್ಕಳು ಓದಿನ ಗಮನನಲ್ಲಿ ಇಟ್ಟುಕೊಂಡು ಕ್ರೀಡೆ ಮತ್ತು ಸ್ಪರ್ಧೆ ಯಲ್ಲಿ ಭಾಗಿಯಾಗುವಂತೆ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸರ್ವೇ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಎಸ್ ವಿ ವೆಂಕಟೇಶ್.ಶಶಾಂಕ್. ಅವರ ಧರ್ಮಪತ್ನಿ ಮಮತಾ ವೆಂಕಟೇಶ್, ವಿನೋದ್, ನಂದೀಶ್ ವಿದ್ಯಾರ್ಥಿನಿಯರ ತಂದೆ ಕೂಡ ಜೊತೆಯಲ್ಲಿ ಇದ್ದರು.
ವರದಿ: ಚಂದ್ರಹಾದನೂರು.