ತಿಪಟೂರು: ನಗರದ ದೊಡ್ಡಯ್ಯನಪಾಳ್ಯದ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘ ನಿಯಮಿತದ 2021-2026 ರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎಸ್.ಸೋಮಶೇಖರ್, ಉಪಾಧ್ಯಕ್ಷರಾಗಿ ಮಂಜುನಾಥ ಎಂ.ಸಿ., ನಿರ್ದೇಶಕರುಗಳಾಗಿ ರಾಜಶೇಖರ್ ಪಿ.ಎಸ್., ಶಂಕರಮೂರ್ತಿ ಹೆಚ್.ಎಸ್., ಸೋಮಶೇಖರಪ್ಪ ಎಂ.ಆರ್., ಶಶಿಕಿರಣ್ ಎಂ., ನಟರಾಜ್, ಶ್ರೀಮತಿ ಲಕ್ಷ್ಮಮ್ಮ,ಶ್ರೀಮತಿ ಗಿರಿಜಾ,ಗಿರೀಶ್ ಕುಮಾರ್. ಎಸ್,ರೇಣುಕಮೂರ್ತಿ.ಬಿ, ಕಾಂತರಾಜ್.ಆರ್, ಮತ್ತು ಸಂಜೀವಯ್ಯ.ಎಸ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರಾದ ಎಸ್. ಸೋಮಶೇಖರ್, ಉಪಾಧ್ಯಕ್ಷ ಮಂಜುನಾಥ್ ಮತ್ತು ರಿಟರ್ನಿಂಗ್ ಅಧಿಕಾರಿ ವಿ.ಎಸ್. ಗುರುರಾಜ್ ಮಾತನಾಡಿದರು. ಆಡಳಿತಾಧಿಕಾರಿ ಶ್ರೀಮತಿ ಬಬಿತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮತ್ತು ಸಿಬ್ಬಂದಿ ಕುಮಾರಸ್ವಾಮಿ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy