ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಮಂಗಳವಾರ ಬೆಳಿಗ್ಗೆಯಿಂದಲೇ ಸಾಕಷ್ಟು ಜನರು ಇಲ್ಲಿನ ಆದರ್ಶ ನಗರದ ಅವರ ನಿವಾಸದ ಮುಂದೆ ಕಾಯುತ್ತಿದ್ದರು. ತೀವ್ರ ನೂಕುನುಗ್ಗಲಿನ ನಡುವೆಯೇ ಸಿಎಂ ಕೆಲವೇ ನಿಮಿಷಗಳಲ್ಲಿ ಮನವಿ ಸ್ವೀಕರಿಸಿ ಸ್ಥಳದಿಂದ ತೆರಳಿದರು.
ಕೊವಿಡ್ ಹಿನ್ನೆಲೆಯಲ್ಲಿ ಸದ್ಯ ಸುರಕ್ಷಿತ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಿಯಮವನ್ನು ಸರ್ಕಾರವೇ ಮಾಡಿದೆ. ಆದರೆ, ವಿವಿಧ ಸಮಾಜದ ಮುಖಂಡರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮನವಿ ನೀಡಲು ಬಂದಾಗ ಯಾವುದೇ ದೈಹಿಕ ಅಂತರವೂ ಇಲ್ಲದೇ ನಾ ಮುಂದು ತಾ ಮುಂದು ಎಂಬಂತೆ ಮನವಿ ನೀಡಲು ಪೈಪೋಟಿ ನಡೆಸಿದರು.
ಇನ್ನು ಕೆಲವರು ಸಿಎಂ ಆಪ್ತ ಸಹಾಯಕರ ಭೇಟಿಗೆ ಅವಕಾಶ ಸಿಕ್ಕರೆ ಸಾಕು ಎಂದು ಕೂಡ ಪರದಾಡುತ್ತಿರುವ ದೃಶ್ಯ ಸ್ಥಳದಲ್ಲಿ ಕಂಡು ಬಂತು. ಬೊಮ್ಮಾಯಿ 9:30ಕ್ಕೆ ಮನೆಯಿಂದ ಹೊರಡುತ್ತಾರೆ ಎನ್ನುವುದು ತಿಳಿದಿದ್ದ ಅನೇಕರು ಬೆಳಗ್ಗೆ 7 ಗಂಟೆಯಿಂದಲೇ ಅವರ ಮನೆಯ ಮುಂದೆ ಜಮಾಯಿಸಿದ್ದರು.
ಇನ್ನೂ ಮನವಿ ನೀಡುವಂತಹ ಸಂದರ್ಭದಲ್ಲಿ ದೈಹಿಕ ಅಂತರ, ಕೊವಿಡ್ ನಿಯಮಗಳು ಎಂದು ನಿಂತುಕೊಂಡರೆ, ನಮ್ಮ ಕೆಲಸ ನಡೆಯುವುದಿಲ್ಲ ಎನ್ನುವುದು ಸಾರ್ವಜನಿಕರ ಅನುಭವದ ಪಾಠ ಕೂಡ ಹೌದು ಹಾಗಾಗಿ ಸಾರ್ವಜನಿಕರು ಒಮ್ಮೆ ಮನವಿ ನೀಡಿದರೆ, ಸಾಕು. ನಮ್ಮ ಸಮಸ್ಯೆ ಬಗೆಹರಿದರೆ ಸಾಕು ಎಂದು ಮನವಿ ನೀಡಲು ಮುಂದಾಗುತ್ತಾರೆ. ಹಾಗಾಗಿ ಮನವಿ ಸ್ವೀಕಾರಕ್ಕೆ ಪ್ರರ್ಯಾಯ ವ್ಯವಸ್ಥೆಯನ್ನು ಯೋಚಿಸುವುದು ಉತ್ತಮ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700