ಕೋಲಾರ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ದೊಡ್ಡ ಬಫೂನ್. ಅವರು ಯಾವಾಗ ಯಾವ ಪಕ್ಷದಲ್ಲಿ ಇರುತ್ತಾರೆ, ಯಾರನ್ನು ಹೊಗಳುತ್ತಾರೆ, ಯಾರನ್ನು ತೆಗಳುತ್ತಾರೆ ಎಂಬುದು ಗೊತ್ತಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಹ್ರಾಹಿಂ ರಾಜಕೀಯವಾಗಿ ಹತಾಶರಾಗಿದ್ದಾರೆ. ಅವರಿಗೆ ರಾಜಕೀಯ ಬದ್ಧತೆ ಇಲ್ಲ ಎಂದು ಟೀಕಿಸಿದರು.
ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಜಿಲ್ಲೆಯ ಜನರ ಆಶಯ ಈಡೇರಿಸಿದೆ. ಇಬ್ರಾಹಿಂ ಅವರು ಜಿಲ್ಲೆಗೆ ಬಂದು ನೀರಿನ ವಿಚಾರದಲ್ಲಿ ಜಲಧಾರೆ ಹರಿಸುವ ಅವಶ್ಯಕತೆಯಿಲ್ಲ. ಇಲ್ಲಿ ಬಂದು ಸುಮ್ಮನೆ ಮುಸ್ಲಿಮರ ಓಲೈಕೆಗೆ ಮಾತನಾಡಿದರೆ ಪ್ರಯೋಜನವಿಲ್ಲ ಎಂದರು.
ಮುಸ್ಲಿಂ ಮತದಾರರು ನಮ್ಮ ಜತೆಗೂ ಇದ್ದಾರೆ. ನಾನು ಕೋಲಾರಕ್ಕೆ ಬಂದು ಬೆಂಕಿ ಹಚ್ಚಿಲ್ಲ, ಬದಲಿಗೆ ಬೆಂಕಿಯಂತಿದ್ದ ಕೋಲಾರವನ್ನು ತಣ್ಣಗೆ ಮಾಡಿದ್ದೇವೆ. ಆದರೆ, ಇಬ್ರಾಹಿಂ ಬೆಂಕಿ ಇಡುವುದಕ್ಕೆ ಕೋಲಾರಕ್ಕೆ ಬಂದಿದ್ದಾರೆ ಎಂದು ಗುಡುಗಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5