ಇರಾನ್ ನ ದಕ್ಷಿಣ ಖೊರಾಸನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸೋರಿಕೆಯಿಂದ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ 51 ಜನರು ಸಾವನ್ನಪ್ಪಿ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮದಂಜೂ ಕಂಪನಿಯು ನಡೆಸುತ್ತಿರುವ ಗಣಿಯಲ್ಲಿರುವ ಬಿ ಮತ್ತು ಸಿ ಎರಡು ಬ್ಲಾಕ್ ಗಳಲ್ಲಿ ಮೀಥೇನ್ ಅನಿಲ ಸ್ಫೋಟದಿಂದ ಈ ದುರಂತ ಸಂಭವಿಸಿದೆ.
ರಾಜಧಾನಿ ಟೆಹ್ರಾನ್ ನ ಆಗ್ನೇಯಕ್ಕೆ ಸುಮಾರು 540 ಕಿಲೋಮೀಟರ್ ದೂರದಲ್ಲಿರುವ ತಬಾಸ್ ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದೆ.
ದುರಂತ ನಡೆದ ವೇಳೆ ಘಟನಾ ಸ್ಥಳದಲ್ಲಿ ಸುಮಾರು 70 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಂತಹ ದುರಂತ ಇದೇ ಮೊದಲಲ್ಲ 2013ರಲ್ಲಿ ಎರಡು ಬಾರಿ, 2009ರಲ್ಲಿ ಹಾಗೂ 2017ರಲ್ಲಿ ಕೂಡ ಸ್ಫೋಟ ಸಂಭವಿಸಿತ್ತು. ಹಲವರು ಪ್ರಾಣ ಕಳೆದುಕೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q