nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್‌ ಗೆ ಆಯ್ಕೆಯಾದ ತುಮಕೂರಿನ ಯುವ ಕ್ರೀಡಾಪಟುಗಳಿಗೆ ಡಾ. ಜಿ. ಪರಮೇಶ್ವರ್ ಅಭಿನಂದನೆ

    November 16, 2026

    ಸಂಘಟನಾತ್ಮಕ ಚಟುವಟಿಕೆಗಳಿಗೆ ವೇಗ: ತುಮಕೂರು–ಚಿತ್ರದುರ್ಗ ಬಿಜೆಪಿ ಸಭೆ

    November 16, 2026

    ಕನಸುಗಳ ಹಿಂದಿನ ರಹಸ್ಯವೇನು? ಸ್ವಪ್ನ ಶಾಸ್ತ್ರದ ಪ್ರಕಾರ ಈ 7 ಕನಸುಗಳು ನೀಡುತ್ತವೆ ವಿಶೇಷ ಸೂಚನೆ!

    November 16, 2026
    Facebook Twitter Instagram
    ಟ್ರೆಂಡಿಂಗ್
    • ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್‌ ಗೆ ಆಯ್ಕೆಯಾದ ತುಮಕೂರಿನ ಯುವ ಕ್ರೀಡಾಪಟುಗಳಿಗೆ ಡಾ. ಜಿ. ಪರಮೇಶ್ವರ್ ಅಭಿನಂದನೆ
    • ಸಂಘಟನಾತ್ಮಕ ಚಟುವಟಿಕೆಗಳಿಗೆ ವೇಗ: ತುಮಕೂರು–ಚಿತ್ರದುರ್ಗ ಬಿಜೆಪಿ ಸಭೆ
    • ಕನಸುಗಳ ಹಿಂದಿನ ರಹಸ್ಯವೇನು? ಸ್ವಪ್ನ ಶಾಸ್ತ್ರದ ಪ್ರಕಾರ ಈ 7 ಕನಸುಗಳು ನೀಡುತ್ತವೆ ವಿಶೇಷ ಸೂಚನೆ!
    • ತಿಪಟೂರು: ಹಾಲ್ಕುರಿಕೆ ರಸ್ತೆ ಭಾಗದಲ್ಲಿ ನ.16ರಿಂದ ಡಿ.5ರವರೆಗೆ ವಿದ್ಯುತ್ ವ್ಯತ್ಯಯ
    • ಚಳಿಗಾಲದಲ್ಲಿ ಪದೇ ಪದೇ ಹಸಿವಾಗುವುದೇಕೆ? ಸಿಹಿ, ಖಾರ ತಿನ್ನುವ ಬಯಕೆಯ ಹಿಂದಿದೆ ಈ ಕಾರಣಗಳು!
    • ಬೀದರ್ ನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 14 ಕೆಜಿಗೂ ಅಧಿಕ ಗಾಂಜಾ ವಶ, ಓರ್ವ ಆರೋಪಿ ಬಂಧನ
    • ಕೆಕೆಆರ್ ಟಿಸಿ ನಿರ್ದೇಶಕ ಸ್ಥಾನಕ್ಕೆ ಚಂದ್ರಕಾಂತ ಹಿಪ್ಪಳಗಾಂವ ರಾಜೀನಾಮೆ ಘೋಷಣೆ
    • ಬಾಕಿ ಸಂಬಳ ಕೇಳಿದ್ದಕ್ಕೆ ಚಾಲಕನ ಅಪಹರಣ, ಮಾರಣಾಂತಿಕ ಹಲ್ಲೆ: ಮಾಲೀಕ ಸೇರಿ ಮೂವರ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳಿಂದ ಒಕ್ಕೂಟ ಪ್ರತಿಭಟನೆ
    ರಾಜ್ಯ ಸುದ್ದಿ May 7, 2024

    ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳಿಂದ ಒಕ್ಕೂಟ ಪ್ರತಿಭಟನೆ

    By adminMay 7, 2024No Comments2 Mins Read
    protest

    ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಹೆಚ್.ಡಿ. ರೇವಣ್ಣರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ನಗರದಲ್ಲಿಂದು ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು. ಅಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

    ರಾಜಕೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಶಾಸಕ ಹೆಚ್.ಡಿ. ರೇವಣ್ಣ ಮತ್ತು ಈತನ ಮಗ ಸಂಸದ ಪ್ರಜ್ವಲ್ ರೇವಣ್ಣ ಇವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೆ, ಮಹಿಳೆಯರ ಬೆತ್ತಲೆ ವೀಡಿಯೋ ಚಿತ್ರೀಕರಿಸಿರುವ ಪ್ರಕರಣ ಹಾಗೂ ಮಹಿಳೆಯೋರ್ವರನ್ನು ಅಪಹರಿಸಿ ಬಚ್ಚಿಟ್ಟ ಪ್ರಕರಣ ಇಡೀ ರಾಜ್ಯ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

    ಹಾಸನ ಜಿಲ್ಲೆಯಲ್ಲಿ ಚುನಾವಣೆ ಪೂರ್ವದಲ್ಲಿ ಸಂಸದ ಪ್ರಜ್ವಲ್ ರೇವಣ್ಣನ ಕಾಮದ ಕರ್ಮಕಾಂಡ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಾಗ, ರಾಜ್ಯ ಗುಪ್ತಚರ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸರ್ಕಾರದ ಗಮನಕ್ಕೆ ತರಬೇಕಾದ ಆದ್ಯ ಕರ್ತವ್ಯವಾಗಿತ್ತು. ಆದರೆ ಹಾಸನದ ಮಹಾಪ್ರಭುಗಳ ಮುಲಾಜಿಗೆ ಹೆದರಿ ಅಲ್ಲಿನ ಗುಪ್ತಚರ ಇಲಾಖೆಯು ತುಟಿ ಬಿಚ್ಚದಿರುವುದನ್ನು ಮನವಿಯಲ್ಲಿ ಖಂಡಿಸಿದ್ದಾರೆ.

    ಹಾಸನ ಜಿಲ್ಲೆಯ ಮತ್ತು ಇತರೆಡೆ ಮಹಿಳೆಯರು ಕೆಲಸಕ್ಕಾಗಿ ಮತ್ತು ಯಾವುದೋ ಸಹಾಯಕ್ಕಾಗಿ ಕೇಳಿಕೊಂಡು ಹೋದ ಮಹಿಳೆಯರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು, ಅವರನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಕೆ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಸುಮಾರು ೨೯೦೦ಕ್ಕೂ ಹೆಚ್ಚು ವೀಡಿಯೋಗಳು ಸದ್ದು ಮಾಡುತ್ತಿವೆ. ಇವುಗಳ ಆಧಾರದ ಮೇಲೆ ಕನಿ? ೩೦೦ ಪ್ರಕರಣವನ್ನಾದರೂ ಸರ್ಕಾರ ಸಂತ್ರಸ್ತ ಮಹಿಳೆಯರಿಗೆ ಕಾನೂನಿನ ಸಲಹೆ ನೀಡಿ ಮಾನಸಿಕ ಧೈರ್ಯ ತುಂಬಿ ಜೊತೆಗೆ ರಕ್ಷಣೆ ನೀಡಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡು ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದೆ.

    ಭೇಟಿ ಬಚಾವೋ, ಭೇಟಿ ಪಡಾವೋ ಎಂದು ಬೊಬ್ಬೆ ಹೊಡೆಯುವ ಪ್ರಧಾನಿ ನರೇಂದ್ರ ಮೋದಿಯವರು ಈಗ ಮೌನವಾಗಿರುವುದು ಏಕೆ? ಮೋದಿಯ ಅಂದ ಭಕ್ತರು ಮತ್ತು ಹಿಂದೂ ಪರ ಸಂಘಟನೆಗಳು ಈ ವಿಚಾರವಾಗಿ ಚಕಾರವೆತ್ತುತ್ತಿಲ್ಲ ಯಾಕೆ? ಇನ್ನಾದರೂ ಹಾಸನ ಜಿಲ್ಲೆಯ ಜನರು ಮತ್ತು ರಾಜ್ಯದ ಜನತೆ ಎಚ್ಚೆತ್ತುಕೊಂಡು ಬೀದಿಗಿಳಿದು ಹೋರಾಡುವ ಮೂಲಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವುದರ ಜೊತೆಗೆ ಆರೋಪಿತರಿಗೆ ಕಠಿಣ ಶಿಕ್ಷೆ ಕೊಡಿಸಲು ಮುಂದಾಗಬೇಕೆಂದು ಒಕ್ಕೂಟ ಕರೆ ನೀಡಿದೆ.

    ಪ್ರತಿಭಟನೆ ನೇತೃತ್ವವನ್ನು ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳಾದ ವಸಂತ್‌ ಕುಮಾರ್, ಉಮೇಶ್ ಕುಮಾರ್, ಪೂರ್ಣೇಶ್, ಹುಣಸೆ ಮಕ್ಕಿ ಲಕ್ಷ್ಮಣ, ಮರ್ಲೆ ಅಣ್ಣಯ್ಯ, ಮಂಜು ಕೂದುವಳ್ಳಿ, ಜಗದೀಶ್ ಕೋಟೆ, ಚಂದ್ರು ಅಂಗಡಿ, ಹೊನ್ನೇಶ್, ಶ್ರೀನಿವಾಸ್ ದಂಟರಮಕ್ಕಿ ಮತ್ತಿತರರು ವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಕೆಕೆಆರ್ ಟಿಸಿ ನಿರ್ದೇಶಕ ಸ್ಥಾನಕ್ಕೆ ಚಂದ್ರಕಾಂತ ಹಿಪ್ಪಳಗಾಂವ ರಾಜೀನಾಮೆ ಘೋಷಣೆ

    November 15, 2026

    ಬಾಕಿ ಸಂಬಳ ಕೇಳಿದ್ದಕ್ಕೆ ಚಾಲಕನ ಅಪಹರಣ, ಮಾರಣಾಂತಿಕ ಹಲ್ಲೆ: ಮಾಲೀಕ ಸೇರಿ ಮೂವರ ಬಂಧನ

    November 15, 2026

    ಆಸ್ತಿ ಖರೀದಿದಾರರ ಜೇಬಿಗೆ ಕತ್ತರಿ! ರಾಜ್ಯಾದ್ಯಂತ ಮಾರ್ಗಸೂಚಿ ದರ ಏರಿಕೆಗೆ ಸಿದ್ಧತೆ

    November 15, 2026

    Comments are closed.

    Our Picks

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026

    ಡಬ್ಬಿಂಗ್ ಲೋಕದಲ್ಲಿ ಹೊಸ ಕ್ರಾಂತಿ; ‘ರಾಮಾಯಣ’ ಚಿತ್ರದಲ್ಲಿ ಬ್ರಹ್ಮ ಎಐ ಮ್ಯಾಜಿಕ್! ಏನಿದರ ವಿಶೇಷತೆ ?

    November 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್‌ ಗೆ ಆಯ್ಕೆಯಾದ ತುಮಕೂರಿನ ಯುವ ಕ್ರೀಡಾಪಟುಗಳಿಗೆ ಡಾ. ಜಿ. ಪರಮೇಶ್ವರ್ ಅಭಿನಂದನೆ

    November 16, 2026

    ತುಮಕೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ U-14, U–17 ಹಾಗೂ U–19 ವಿಭಾಗಗಳ ರೈಫಲ್ ಶೂಟಿಂಗ್…

    ಸಂಘಟನಾತ್ಮಕ ಚಟುವಟಿಕೆಗಳಿಗೆ ವೇಗ: ತುಮಕೂರು–ಚಿತ್ರದುರ್ಗ ಬಿಜೆಪಿ ಸಭೆ

    November 16, 2026

    ಕನಸುಗಳ ಹಿಂದಿನ ರಹಸ್ಯವೇನು? ಸ್ವಪ್ನ ಶಾಸ್ತ್ರದ ಪ್ರಕಾರ ಈ 7 ಕನಸುಗಳು ನೀಡುತ್ತವೆ ವಿಶೇಷ ಸೂಚನೆ!

    November 16, 2026

    ತಿಪಟೂರು: ಹಾಲ್ಕುರಿಕೆ ರಸ್ತೆ ಭಾಗದಲ್ಲಿ ನ.16ರಿಂದ ಡಿ.5ರವರೆಗೆ ವಿದ್ಯುತ್ ವ್ಯತ್ಯಯ

    November 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.