ಕೊರಟಗೆರೆ: KSRTC ಬಸ್ ಮತ್ತು ಲಗೇಜ್ ಆಟೋ ನಡುವೆ ಡಿಕ್ಕಿಯಾದ ಪರಿಣಾಮ, ಲಗೇಜ್ ಚಾಲಕ ಗಾಯಗೊಂಡ ಘಟನೆ ಕೊರಟಗೆರೆ ಪಟ್ಟಣದ ಸುವರ್ಣಮುಖಿ ಪೇಟ್ರೋಲ್ ಬಂಕ್ ಸಮೀಪದ ಬೈಪಾಸ್ ರಸ್ತೆ ಬಳಿ ನಡೆದಿದೆ.
ಮಧುಗಿರಿ ತಾಲೂಕಿನ ಬೂದೇನಹಳ್ಳಿ ಗ್ರಾಮದ ಲಗೇಜ್ ಆಟೋ ಚಾಲಕ ರಾಮಾಂಜಿ(40) ಗಾಯಗೊಂಡವರಾಗಿದ್ದಾರೆ. ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಮನಸ್ಸಿಗೆ ಬಂದ ಹಾಗೇ ವಾಹನಗಳ ಸಂಚಾರ ಕಂಡು ಬಂದಿದೆ. ಟ್ರಾಫಿಕ್ ರೂಲ್ಸ್ ಪಾಲನೆ ಮಾಡದ ವಾಹನ ಸವಾರರಿಗೆ ಸಾರಿಗೆ ಇಲಾಖೆಯ ಭಯವೇ ಇಲ್ಲದಂತಾಗಿದೆ.
ಕೊರಟಗೆರೆಯಲ್ಲಿ ವಾಹನ ಸವಾರರು ಇಷ್ಟ ಬಂದ ಹಾಗೇ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ನಿರ್ಲಕ್ಷದ ವಾಹನ ಚಾಲನೆಯಿಂದ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.
ಘಟನೆ ಹಿನ್ನೆಲೆ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


