ಹಳೆಯ ಸಿನಿಮಾಗಳ ಹಾಸ್ಯ ನಟ ಟೆನ್ನಿಸ್ ಕೃಷ್ಣ ಖಾಸಗಿ ಚಾನಲ್ ನ ಧಾರವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
‘‘ಲಕ್ಷ್ಮಿ ಟಿಫನ್ ರೂಮ್’ ಸೀರಿಯಲ್‌ಗೆ ನಟ ಟೆನ್ನಿಸ್ ಕೃಷ್ಣ ಬಣ್ಣ ಹಚ್ಚಿದ್ದಾರೆ. ಕನ್ನಡದ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ರೇಖಾ ದಾಸ್ ಮತ್ತು ಟೆನ್ನಿಸ್ ಕೃಷ್ಣ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.
ಅವರೊಂದಿಗೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜೊತೆಯಾಗಿ ಟೆನ್ನಿಸ್ ಕೃಷ್ಣ ನಟಿಸಿದ್ದಾರೆ. ಈಗ ಕಿರುತೆರೆಗೆ ಹೊಸ ಧಾರಾವಾಹಿ ‘ಲಕ್ಷ್ಮಿ ಟಿಫನ್ ರೂಮ್’ ಪ್ರಾಜೆಕ್ಟ್ ನಲ್ಲಿ ಬಹುಮುಖ್ಯ ಪಾತ್ರಕ್ಕೆ ಟೆನ್ನಿಸ್ ಕೃಷ್ಣ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.


