ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿರುವ ಭಾಷಣಕ್ಕೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಆಕ್ಷೇಪಿಸಿದ ಹಿನ್ನೆಲೆ, ಮೂವರ ವಿರುದ್ಧವೂ ಬಿಹಾರದ ಮುಜಪ್ಫರ್ ಪುರ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಸೋನಿಯಾ ಗಾಂಧಿಯವರು, ರಾಷ್ಟ್ರಪತಿಯವರು ತಮ್ಮ ಭಾಷಣವನ್ನು ಮುಗಿಸುವ ಹೊತ್ತಿಗೆ ತುಂಬಾ ಆಯಾಸವಾದಂತೆ ಕಂಡುಬಂದರು. ಅವರ ಮಾತುಗಳು ತೊಡರುತ್ತಿದ್ದವು, ರಾಷ್ಟ್ರಪತಿಗಳ ಭಾಷಣಕ್ಕೆ ಅಯ್ಯೋ… ಪಾಪ ಎಂದೆನಿಸಿತು ಎಂದಿದ್ದರು.
ರಾಹುಲ್ ಗಾಂಧಿ ಕೂಡ ರಾಷ್ಟ್ರಪತಿಗಳ ಭಾಷಣ ಭಾರೀ ಬೇಸರ ತರಿಸುತ್ತಿತ್ತು ಎಂದಿದ್ದರು. ಪ್ರಿಯಾಂಕ ಗಾಂಧಿ ಕೂಡ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದರು. ಈ ಹೇಳಿಕೆಗಳ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ವಿಚಾರಣೆ ಫೆ. 10ರಂದು ನಡೆಯಲಿದೆ.
ಮುಜಫ್ಫರ್ ನಗರದ ನಿವಾಸಿಯಾಗಿರುವ ಸುಧೀರ್ ಓಝಾ ಎಂಬ ವಕೀಲರು ಈ ದೂರು ದಾಖಲಿಸಿದ್ದಾರೆ. ರಾಷ್ಟ್ರಪತಿಯವರ ಭಾಷಣವನ್ನು ಟೀಕಿಸುವ ಭರದಲ್ಲಿ ಈ ಮೂವರೂ ನಾಯಕರು, ಈ ದೇಶದ ಅತ್ಯುನ್ನತ ನಾಗರಿಕರಿಗೆ ಅಪಮಾನ ಆಗುವಂಥ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx