ತುಮಕೂರು: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ಹಗರಣದ ಆರೋಪ ಹೊರಿಸಿ ಅಲ್ಲಿನ ಸರ್ಕಾರ ಬಂಧಿಸಿದ್ದ ಕ್ರಮ ವಿರೋಧಿಸಿ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.
ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಲ್ಲಿ ಚಂದ್ರ ಬಾಬು ನಾಯ್ಡು ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಇತ್ತೀಚಿಗೆ ಆಂದ್ರ ಪೊಲೀಸರು ಬಂಧಿಸಿದ್ದರು.
ಇದನ್ನು ವಿರೋಧಿಸಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಂದಮೂರಿ ಬಾಲಕೃಷ್ಣ ಅಭಿಮಾನಿ ಬಳಗ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿ ಬಳಗ, ನಾರಾ ಚಂದ್ರಬಾಬು ನಾಯ್ಡು ಅಭಿಮಾನಿ ಬಳಗದ ವತಿಯಿಂದ ಪಾವಗಡ ಪಟ್ಟಣದ ನಿರೀಕ್ಷಣ ಮಂದಿರದಿಂದ ಶನಿಮಹಾತ್ಮ ಸರ್ಕಲ್ ನ ವರೆಗೂ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಡಾ,ವೆಂಕಟರಾಮಯ್ಯ, ಆಂಧ್ರಪ್ರದೇಶ ಕಲ್ಯಾಣದುರ್ಗಂ ಟಿಡಿಪಿ ಉಸ್ತುವಾರಿ ಉಮಾ ಮಹೇಶ್ವರ್,ಪಾವಗಡ ತಾಲೂಕಿನ ಹಿರಿಯ ಮುಖಂಡರಾದ ಮಾನಂ ವೆಂಕಟಸ್ವಾಮಿ, ಹಿಂದೂಪುರ ಟಿಡಿಪಿ ಜಿಲ್ಲಾಧ್ಯಕ್ಷೆ ಸುಬ್ಬರತ್ನಮ್ಮ, ಶಾಂತಿ ಮೆಡಿಕಲ್ ನ ದೇವರಾಜ್, ರೈತ ಮುಂಖಡ ಗಂಗಾಧರ್ ನಾಯ್ಡು, ಪರಿಟಾಲ ವೆಂಕಟೇಶ್, ತರಕಾರಿ ಕೃಷ್ಣಪ್ಪ, ಮಾನಂ ಶಶಿಕಿರಣ್, ತಿರುಮಣಿ ಸುರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೆ ವೇಳೆ ಪ್ರತಿಭಟನಾಕಾರರು ಪಾವಗಡ ಪಟ್ಟಣದ ಮಧ್ಯಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾಪಣೆ ಮಾಡಿದರು.