ಕಾಂಗ್ರೆಸ್ ಪಕ್ಷದವರು ತೆರಿಗೆ ಕಟ್ಟಿಲ್ಲ. ಹೀಗಾಗಿ ಅವರ ಬ್ಯಾಂಕ್ ಖಾತೆಗಳು ಸೀಜ್ ಆಗಿವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ, ನಾವು ಯಾವುದೇ ಆಕೌಂಟ್ ಗಳನ್ನ ಸೀಜ್ ಮಾಡಿಲ್ಲ. ಕಾಂಗ್ರೆಸ್ ನವರು ಟ್ಯಾಕ್ಸ್ ಕಟ್ಟಬೇಕಿತ್ತು ಆದರೆ ಕಟ್ಟಿಲ್ಲ ಹೀಗಾಗಿ ಅಕೌಂಟ್ ಸೀಜ್ ಆಗಿದೆ ನಾವು ಕಾಂಗ್ರೆಸ್ ವೀಕ್ ಮಾಡಿಲ್ಲ. ಜನರೇ ಕಾಂಗ್ರೆಸ್ ವೀಕ್ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ದುರಹಂಕಾರದಿಂದ ಇಡಿ ಸಮನ್ಸ್ ಗಳಿಗೆ ಉತ್ತರಿಸಿಲ್ಲ. ಹೀಗಾಗಿ ಅವರ ಬಂಧನ ವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


