ಕೊರಟಗೆರೆ : ಪಟ್ಟಣದ 9ನೇ ವಾರ್ಡಿನ ದೊಡ್ಡಪೇಟೆಯಲ್ಲಿ ಪೂರ್ವಿಕರ ಕಾಲದಿಂದಲೂ ನೆಲೆಸಿರುವ ರಾಮಾಂಜನನ ಬೀದಿ ಹಟ್ಟಿ ಮಾರಮ್ಮ ಎಂದೇ ಪ್ರಖ್ಯಾತಿಗೊಂಡಿರುವ ಮಾರಮ್ಮ ದೇವಿಯ ನೂತನ ದೇವಸ್ಥಾನ ನಿರ್ಮಾಣ ಹಾಗೂ ದೇವಿಯ ಮೆರವಣಿಗೆ ವಿಗ್ರಹವನ್ನು ಸ್ಥಾಪಿಸಲಾಯಿತು. ವಾರ್ಡಿನ ಪ್ರತಿ ಮನೆಯಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು..
ದೇವಸ್ಥಾನದ ಅರ್ಚಕರು ಮಾತನಾಡಿ, ನಮ್ಮ ಹಿಂದೂ ಧರ್ಮದಲ್ಲಿ ಅದರಲ್ಲೂ ಯುವಕರಲ್ಲಿ ದೇವರ ಮೇಲಿನ ಭಕ್ತಿ ದಿನೇ ದಿನೇ ಕಡಿಮೆಯಾಗುತ್ತಿದೆ ನಮ್ಮ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕು ದೇವರಲ್ಲಿ ನಂಬಿಕೆ ಇಡಬೇಕು ನಮ್ಮ ವಾರ್ಡಿನ ಯುವಕರೆಲ್ಲರೂ ಸೇರಿ ಈ ದೇವಿಯ ದೇವಸ್ಥಾನದ ಜೀವನೋದ್ಧಾರವನ್ನ ಮಾಡಿದ್ದೇವೆ ಪ್ರತಿ ಗ್ರಾಮದಲ್ಲೂ ದೇವಸ್ಥಾನ ಶಾಲೆ ಇರಲೇಬೇಕು ದೇವಸ್ಥಾನದಲ್ಲಿ ಭಕ್ತಿ ಶಾಲೆಯಲ್ಲಿ ವಿದ್ಯೆ ಪಡೆದವನು ದೇಶವನ್ನೇ ಗೆಲ್ಲಬಲ್ಲ ಎಂದು ತಿಳಿಸಿದರು
ಗ್ರಾಮಸ್ಥರು ಒಬ್ಬರು ಮಾತನಾಡಿ, ನಾವು ಚಿಕ್ಕ ವಯಸ್ಸಿನಲ್ಲಿ ಹುಷಾರಿಲ್ಲದಿದ್ದಾಗ ಆಸ್ಪತ್ರೆಗೆ ಹೋಗುತ್ತಿರಲಿಲ್ಲ ನಮ್ಮ ತಾಯಿ ತಂದೆ ಇಲ್ಲಿ ಹರಕೆ ಕಟ್ಟುತ್ತಿದ್ದರು ಹರಕೆ ಕಟ್ಟಿದ ಮರುದಿನವೇ ನಾವು ಆರೋಗ್ಯದಿಂದ ಓಡಾಡುತ್ತಿದ್ದೆವು ಅದೇ ಭಕ್ತಿ ಇಂದಿಗೂ ನಮ್ಮಲ್ಲಿ ಇದೆ ಅಂದು ಚಿಕ್ಕದಾಗಿದ್ದ ದೇವಸ್ಥಾನ ಇಂದು ಗ್ರಾಮದ ಯುವಕರಿಂದ ದೊಡ್ಡದಾಗಿ ನಿರ್ಮಾಣವಾಗಿದೆ ತಾಯಿ ಪ್ರತಿಯೊಬ್ಬರಿಗೂ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು..
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಿರಿಯರು ಮಹಿಳೆಯರು ಮಕ್ಕಳು ಯುವಕರು ಪಾಲ್ಗೊಂಡಿದ್ದರು.
ಗ್ರಾಮದ ಮುಖಂಡ ಮಹೇಶ್ ಮಾತನಾಡಿ :
ಬಹಳಷ್ಟು ಕಡೆ ದೇವರನ್ನು ನೋಡುತ್ತೇವೆ ಎಲ್ಲಾ ಕಡೆಯೂ ಭಕ್ತಿಯಿಂದ ಕೈ ಮುಗಿಯುತ್ತೇವೆ ಎಲ್ಲಿ ಹೋದರು ಎಲ್ಲೇ ಕೈಮುಗಿದರೂ ನಮ್ಮ ಗ್ರಾಮದ ಗ್ರಾಮ ದೇವತೆಗೆ ನಮಸ್ಕರಿಸುವ ಪ್ರೀತಿಯೇ ಬೇರೆ ನಮ್ಮ ಗ್ರಾಮದಲ್ಲಿ ನಡೆಯುವ ಜಾತ್ರೆಗಳು ಸಡಗರ ಸಂಭ್ರಮಗಳು ನಮಗೆ ಇಷ್ಟ ನಮ್ಮ ಹಟ್ಟಿ ಮಾರಮ್ಮ ದೇವಿಯು ಇತಿಹಾಸವನ್ನು ಹೊಂದಿದ್ದಾಳೆ ಈ ತಾಯಿಯನ್ನು ನಂಬಿದವರನ್ನು ಎಂದಿಗೂ ಕೈ ಬಿಟ್ಟಿಲ್ಲ ತಾಯಿ ಮಾರಮ್ಮ ಈಗಿನ ಮಕ್ಕಳು ದೇವರ ಬಗ್ಗೆ ದೇವರಲ್ಲಿ ಇರುವ ನಂಬಿಕೆ ಕಡಿಮೆಯಾಗುತ್ತದೆ ಮನೆಯಲ್ಲಿರುವ ಹಿರಿಯರು ದೇವರ ಬಗ್ಗೆ ಮಕ್ಕಳಿಗೆ ಪ್ರತಿನಿತ್ಯವು ತಿಳಿಸಬೇಕು ಮಕ್ಕಳಲ್ಲಿ ಸಂಸ್ಕಾರ ಇರಬೇಕು ಅದು ಅವರಿಗೆ ಮುಂದೆ ದಾರಿದೀಪವಾಗುತ್ತದೆ ಎಲ್ಲರಿಗೂ ತಾಯಿಯ ಕೃಪೆ ಇರಲಿ ಎಂದು ತಿಳಿಸಿದರು.
ಗ್ರಾಮದ ಮಹಿಳೆ ಮುದ್ದಮ್ಮ ಮಾತನಾಡಿ :
ನಾವು ಚಿಕ್ಕ ವಯಸ್ಸಿನಿಂದಲೂ ಮಾರಮ್ಮನ ಚಿಕ್ಕ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ ಇದೀಗ ನಮ್ಮ ಮಕ್ಕಳು ಗ್ರಾಮದ ಯುವಕರು ಎಲ್ಲರೂ ಸೇರಿಕೊಂಡು ದೊಡ್ಡ ದೇವಸ್ಥಾನವನ್ನ ಕಟ್ಟಿಸಿದ್ದಾರೆ ತಾಯಿಯ ಮೆರವಣಿಗೆ ವಿಗ್ರಹವನ್ನು ಮಾಡಿಸಿದ್ದಾರೆ ಎಲ್ಲರಿಗೂ ತಾಯಿಯ ಕೃಪೆ ಸದಾ ಇರಲಿ ಆರೋಗ್ಯ ಐಶ್ವರ್ಯ ಕೊಟ್ಟು ಎಂದು ತಿಳಿಸಿದರು.
ವರದಿ : ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4