ಬೆಂಗಳೂರು: ಸಿಲಿಕಾನ್ ಸಿಟಿಗೆ ಮಳೆಯ ಎಂಟ್ರಿಯೇನೋ ಆಗಿದೆ. ಆದ್ರೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಬೆಂದ ಕಾವಲಿಯಂತಿದ್ದ ವಾತವರಣ ತರಕಾರಿ ಬೆಲೆಯನ್ನ ಮತ್ತಷ್ಟು ದುಪ್ಪಟ್ಟು ಮಾಡ್ಬಿಟ್ಟಿದೆ. ಸೊಪ್ಪು, ತರಕಾರಿ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಮದುವೆ ಸೀಸನ್ ನಿಂದಾಗಿ ಬೇಡಿಕೆ ಹೆಚ್ಚಿದೆ, ಕಳೆದ ವಾರದಿಂದಲೇ ಬೆಲೆ ಏರಿ ಕೆಜಿ 100ರೂ ನಂತೆ ಮಾರಾಟವಾಗ್ತಿದೆ ಬೀನ್ಸ್, ಹಸಿಮೆಣಸು, ಹಿರೇಕಾಯಿ ನಿಂಬೆ ಹಣ್ಣು. ಇತ್ತ, ಬಿಸಿ ಎಫೆಕ್ಟ್ ಹೂವಿನ ಮೇಲೂ ಬಿದ್ದಿದ್ದು, ಉದುರಿ ಬೀಳ್ತಿದೆ. ಇಳುವರಿ ಕಡಿಮೆಯಾಗಿದೆ. ಹೀಗಾಗಿ ಹೂವಿನ ರೇಟ್ ಕೂಡ ದುಪ್ಪಟ್ಟಾಗಿದೆ. ಕಳೆದ ತಿಂಗಳು ಕೆಜಿಗೆ 30 ರೂಪಾಯಿ ಇರುವ ತರಕಾರಿ, ಈ ತಿಂಗಳು 60 ರೂಪಾಯಿ ಆಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
ಸಬ್ಬಸಿಗೆ ಸೊಪ್ಪು ಪ್ರತಿ ಕಟ್ಟಿಗೆ 20ರೂಪಾಯಿ ಆಗಿದೆ. ಕೊತ್ತಂಬರಿ ಸೊಪ್ಪು 15ರಿಂದ 20 ರೂಪಾಯಿ ಆದ್ರೆ, ಮೆಂತ್ಯೆ ಸೊಪ್ಪು ಪ್ರತಿ ಕಟ್ಟಿಗೆ 10 ರಿಂದ 20 ರೂಪಾಯಿ ಆಗಿದೆ. ಪುದೀನಾ ಮತ್ತು ಪಾಲಕ್ ಸೊಪ್ಪು 10ಕ್ಕೆ ಏರಿದ್ದು ದುಪ್ಪಟ್ಟಾಗಿದೆ.
ಬೀನ್ಸ್ ₹160
ನಿಂಬೆ ಹಣ್ಣು ₹150-₹200
ನುಗ್ಗೆ ಕಾಯಿ ₹100
ಹಸಿ ಮೆಣಸಿನಕಾಯಿ ₹100
ಅವರೆಕಾಯಿ ₹84 ರೂ.
ಹೀರೆ ಕಾಯಿ ₹80 -₹100
ಹಾಗಲಕಾಯಿ 80 ರೂ.
ಬದನೆಕಾಯಿ ₹60
ಒಟ್ಟಿನಲ್ಲಿ ತರಕಾರಿ, ಸೊಪ್ಪು ಎಲ್ಲಾ ಬೆಲೆಗಳು ಏರಿದ್ದು, ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296