ತುಮಕೂರು: ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ನಿರಂತರ ಅಪಘಾತ. ಹೆದ್ದಾರಿ ಸಿಬ್ಬಂದಿಗಳಿಗೆ ಎಎಸ್ ಪಿ ಮರಿಯಪ್ಪ ಕ್ಲಾಸ್ ತೆಗೆದುಕೊಂಡರು.
ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ನಿರಂತರ ಅಪಘಾತ ವಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪರಿಣಾಮ ಪದೇ ಪದೇ ಅಪಘಾತ ಸಂಭವಿಸುತ್ತಿದೆ.
ಕಳೆದ ರಾತ್ರಿ ನಡೆದ ಸರಣಿ ಅಪಘಾತಕ್ಕೆ ದಂಪತಿಗಳು ಸಾವನಪ್ಪಿದ್ರು. ಡೆಡ್ಲಿ ಆಕ್ಸಿಡೆಂಟ್ ಸ್ಪಾಟ್ ಆದ ಚಿಕ್ಕನಹಳ್ಳಿ ಘಟನಾ ಸ್ಥಳಕ್ಕೆ ಎಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅಪಘಾತ ಪ್ರಕರಣ ಹೆಚ್ಚುತ್ತಿದೆ. ಮೇಲುಸೇತುವೆ ನಿರ್ಮಾಣದ ಹಿನ್ನಲೆ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮಾಡಲಾಗಿದೆ. ವಾಹನ ಸಂಚಾರ ದಟ್ಟಣೆಯಿಂದ ಗುಂಡಿಗಳಿಂದ ತುಂಬಿದ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚರಿಸುತ್ತಿದೆ. ಹಾಗಾಗಿ ಸೂಕ್ತ ಸೂಚನಾ ಫಲಕ ಆಳವಡಿಸುವಂತೆ ಅವರು ನಿರ್ದೇಶನ ನೀಡಿದರು. ಎಎಸ್ಪಿ ಮರಿಯಪ್ಪ ಭೇಟಿ ವೇಳೆ ಕಳಂಬೆಳ್ಳ ಪೊಲೀಸರು ಸಾಥ್ ನೀಡಿದರು.