ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಬಡವರು ಆಹಾರಕ್ಕಾಗಿ, ಬಟ್ಟೆಗಾಗಿ ಸಂಕಷ್ಟ ಪಡುತ್ತಿದ್ದಾರೆ. ಮತ್ತೊಂದೆಡೆ, ಇದೇ ಅವಧಿಯಲ್ಲಿ ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಬಡವ ಶ್ರೀಮಂತರ ಅಂತರ ಕೊರೊನಾ ಕಾಲದಲ್ಲಿ ಏರಿಕೆಯಾಗಿದೆ.
ಎನ್ ಜಿಒ ಆಕ್ಸ್ ಫ್ಯಾಮ್ ಇಂಡಿಯಾದ ವರದಿಯ ಪ್ರಕಾರ, 2021 ರಲ್ಲಿ ಭಾರತದಲ್ಲಿ ಶೇಕಡಾ 84 ರಷ್ಟು ಕುಟುಂಬಗಳ ಆದಾಯವು ಕುಸಿದಿದೆ. ಆದರೆ ಭಾರತೀಯ ಬಿಲಿಯನೇರ್ ಗಳ ಸಂಖ್ಯೆ 102 ರಿಂದ 142 ಕ್ಕೆ ಏರಿದೆ.
ಇಂದು ವಿಶ್ವ ಆರ್ಥಿಕ ವೇದಿಕೆ 2022 ರ ಮೊದಲ ದಿನ. ಈ ಸಂದರ್ಭದಲ್ಲಿ, ಆಕ್ಸ್ ಫ್ಯಾಮ್ ಇಂಡಿಯಾ ವಾರ್ಷಿಕ ಅಸಮಾನತೆಯ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಕರೋನಾ ಅವಧಿಯಲ್ಲಿ ಭಾರತೀಯ ಬಿಲಿಯನೇರ್ ಗಳ ಒಟ್ಟು ಸಂಪತ್ತು ದ್ವಿಗುಣಗೊಂಡಿದೆ.
ಟಾಪ್-10 ಶ್ರೀಮಂತರು ಮುಂದಿನ 25 ವರ್ಷಗಳ ಕಾಲ ದೇಶದ ಎಲ್ಲಾ ಶಾಲಾ-ಕಾಲೇಜುಗಳನ್ನು ನಡೆಸಬಲ್ಲಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂಬ ಅಂಶದಿಂದ ಅವರ ಸಂಪತ್ತನ್ನು ಅಳೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy